ಸುಳ್ಯ ಕೃಷಿ ಇಲಾಖೆಯಿಂದ ಮಣ್ಣಿನ ಪರೀಕ್ಷೆ ಹಾಗೂ ಪೋಷಣೆ ಬಗ್ಗೆ ಮಾಹಿತಿ
ಫಲಾನುಭವಿ ಕೃಷಿಕರಿಗೆ ಉಚಿತವಾಗಿ 2000 ಗೇರು ಸಸಿ ವಿತರಣೆ
ಐ.ಸಿ. ಎ.ಆರ್ ಗೇರು ಸಂಶೋಧನ ನಿರ್ದೇಶನಾಲಯ ಇಲಾಖೆ ಪುತ್ತೂರು, ಸಂಪಾಜೆ ಗ್ರಾಮ ಪಂಚಾಯತ್ ,ಕೃಷಿ ಇಲಾಖೆ ಸುಳ್ಯ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ , ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ , ತಾಲೂಕು ಪಂಚಾಯತ್ ಎನ್.ಆರ್.ಎಲ್ ಎಂ ಸಂಜೀವಿನಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್,
ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸಂಪಾಜೆ ಆಶ್ರಯದಲ್ಲಿ ಕೃಷಿಕರಿಗೆ
ಗೇರು ಕೃಷಿ ತರಬೇತಿ ಹಾಗೂ ಗಿಡ ವಿತರಣಾ ಕಾರ್ಯಕ್ರಮವು ಸೆ.24 ರಂದು ಸಂಪಾಜೆ ಗ್ರಾಂ. ಪಂ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವು ಐ. ಸಿ. ಎ.ಆರ್ ಹಾಗೂ ರೈತ ಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಗೊಂಡೊಂಡಿತು. ಗ್ರಾಂ.ಪಂ ಅಧ್ಯಕ್ಷರಾದ ಸುಮತಿ ಶಕ್ತಿ ವೇಲು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಾತನಾಡಿ ” ನಮ್ಮ ಗ್ರಾಮ ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೀಟಗಳಿಂದ ಬೆಳೆಗಳಿಗೆ ಹಳದಿ ರೋಗ ಬಾಧಿತಕ್ಕೆ ಒಳಗಾಗಿದ್ದು ,ಕೃಷಿಕರು ಕೃಷಿಯನ್ನು ಮಾಡುವಲ್ಲಿ ಹಿಂದೇಟು ಹಾಕಿದ್ದಾರೆ. ಆದರೆ ಇಂದು ನಡೆಯುವ ಕಾರ್ಯಕ್ರಮದಲ್ಲಿ ಹೆಚ್ಚಿನ ಕೃಷಿಕರು ಗೇರು ಕೃಷಿಯ ಬಗ್ಗೆ ವಿಜ್ಞಾನಿಗಳು ನೀಡುವ ಮಾಹಿತಿಯನ್ನು ಪಡೆದು ಕೃಷಿ ಬೆಳವಣಿಗೆಯ ಮಹತ್ವವನ್ನು ಪಡೆದುಕೊಳ್ಳಬೇಕು ಎಂದರು.
















ಪ್ರಧಾನ ವಿಜ್ಞಾನಿ, ಜನನ ಶಾಸ್ತ್ರ, ಸಸ್ಯ ಸಂಕರಣೆ ಮುಖ್ಯಸ್ಥರಾದ ಡಾ. ಈರದಾಸಪ್ಪ ಅವರು ಮಾತನಾಡಿ ” ನಮ್ಮ ಗ್ರಾಮ ಕೃಷಿಗೆ ಹೆಚ್ಚು ಒತ್ತಾಯ ನೀಡಿಡೆ, ಆದರೆ ಕೃಷಿಯರು ಜೊತೆಗೆ ಗ್ರಾಮ ಬೆಳೆಯಬೇಕಾದರೆ ಗ್ರಾಮ ಪಂಚಾಯತ್ ಸಹಕಾರ ಮುಖ್ಯವಾಗಿದೆ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಳೆಗಾರರಿಗೆ ಹಳದಿ ರೋಗದಿಂದ ಕಂಗಲಾಗಿ ಕೃಷಿಯಲ್ಲಿ ಹಿಂದೇಟು ಹಾಕಿದ್ದಾರೆ. ಆದರೆ ನಮ್ಮ ಇಲಾಖೆಯಿಂದ ಕೃಷಿಕರ ಅಭಿವೃದ್ಧಿಗೆ ಕೃಷಿಕರಿಗೆ ಉಚಿತ ಮಣ್ಣಿನ ಪರೀಕ್ಷೆ, ತರಬೇತಿ, ಬೆಳೆ ವಿಮೆ, ಹಾಗೂ ಉಚಿತ ಗೇರು ಬೀಜ ಸಸಿಗಳನ್ನು ನೀಡುತ್ತಿದ್ದೇವೆ. ಮಾಹಿತಿಯನ್ನು ಪಡೆದು ಕೃಷಿಕರು ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಿ ಎಂದು ಶುಭಹಾರೈಸಿದ ಬಳಿಕ ಗೇರು ಗಿಡಗಳ ತಳಿಗಳ ಬಗ್ಗೆ , ಪಾಲನೆ _ ಪೋಷಣೆ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.

ಸಂಪಾಜೆ ಗ್ರಾಂ.ಪಂ ಉಪಾಧ್ಯಕ್ಷ ಎಸ್. ಕೆ ಹನೀಫ್ ಹಾಗೂ ಮಾಜಿ ಗ್ರಾಂ .ಪಂ ಅಧ್ಯಕ್ಷ ಜಿ.ಕೆ ಹಮೀದ್ ಮಾತನಾಡಿ ” ಕೃಷಿಕರಿಗೆ ಅನುಕೂಲವಾಗುವಂತೆ ಐ.ಸಿ. ಎ.ಆರ್ ಸಂಶೋಧನ ಇಲಾಖೆಯಿಂದ ಕೃಷಿ, ಬೆಳೆ, ಮಣ್ಣಿನ ಪರೀಕ್ಷೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಎಲ್ಲ ಕೃಷಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೃಷಿಯ ಮಹತ್ವದ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕು ಎಂದರು.
ಬಳಿಕ ಸಭೆಯಲ್ಲಿ ಗೇರು ಗಿಡವನ್ನು ಕೃಷಿಕರಿಗೆ ವಿತರಿಸಿ ಚಾಲನೆ ನೀಡಲಾಯಿತು. ಬಳಿಕ ಸುಳ್ಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ,ಇಲಾಖೆ ವತಿಯಿಂದ ಕೃಷಿಕರಿಗೆ ಮಣ್ಣಿನ ಪರೀಕ್ಷೆ, ತರಬೇತಿ, ಕೃಷಿ ಇಲಾಖೆಯಿಂದ ನೀಡುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ವಿಜ್ಞಾನಿಗಳಾದ ಡಾ. ಅಶ್ವತಿ , ಡಾ. ಚಂದ್ರ ಕುಮಾರ್ , ಹಾಗೂ ಡಾ. ಭಾಗ್ಯ ಕೆ . ಪಿ ಅವರು ಗಿಡಗಳ ಬೆಳವಣಿಗೆ , ಪಾಲನೆ – ಪೋಷಣೆ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಿ. ಕೆ ಹಮೀದ್, ಸದಸ್ಯರಾದ ಜಗದೀಶ್ ರೈ ,ಎನ್. ಆರ್.ಎಲ್.ಎಂ. ಸಂಜೀವಿನಿ ತಾಲೂಕು ಪಂಚಾಯತ್ ಸುಳ್ಯ ಕೃಷಿ ಜೀವನೋಪಾಯ
ಮೇಲ್ವಿಚಾರಕ ಹೃತಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಕೃಷಿಕರಾದ ಜಗದೀಶ್ ಕೆ. ಪಿ
ಗಣಪತಿ ಭಟ್ , ಶ್ರೀಧರ , ಶಂಕರ್ ಪ್ರಸಾದ್ ರೈ ಸಂಪಾಜೆ , ಹಮೀದ್ ಪಾಂಬಾರು , ಶ್ರೀಧರ ಮಾದೇಪಾಲ, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಉಪಾಧ್ಯಕ್ಷರಾದಯಮುನಾ ಬಿ.ಎಸ್,ಸದಸ್ಯರಾದ ಸುಂದರಿ ಮುಂಡಡ್ಕ, ಲಿಸ್ಸಿ ಮೊನಾಲಿಸಾ, ರಜನಿ ಶರತ್ , ಅನುಪಮಾ ,
ಕಾಂತಿ ಬಿ.ಎಸ್ , ಸಂಪಾಜೆ ಕೃಷಿ ಸಖಿ ಮೋಹಿನಿ ವಿಶ್ವನಾಥ್ ( ನಿಶಾ) , ಸುಳ್ಯ ಕೃಷಿ ಇಲಾಖೆಯ (ಬಿ. ಟಿ.ಎಂ) ನಂದಿತಾ , ಲಲನಾ, ಸೌಮ್ಯ ಕಡೆಪಾಲ , ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ , ಕೃಷಿ ಇಲಾಖೆ ಸಿಬ್ಬಂದಿ ವರ್ಗ, ಕೃಷಿಕರು , ಗ್ರಾಮಸ್ಥರು ಉಪಸ್ಥಿತರಿದ್ದರು.
ಬಳಿಕ ಭಾಸ್ಕರ, ನೇತ್ರ ಗಂಗಾ (h _130) ನೇತ್ರಾ ಜಂಬೂ( 1)
ನೇತ್ರಾ ಜಂಬೂ( 2)ನೇತ್ರಾ ಉಭಯ, ಮೊದಲಾದ 5 ತಳಿಯ 2000 ಗಿಡಗಳನ್ನು ನೂರಕ್ಕೂ ಹೆಚ್ಚು ಕೃಷಿಕರಿಗೆ ವಿತರಿಸಲಾಯಿತು.
ಗುರುಪ್ರಸಾದ್ ಸರ್ವರನ್ನು ಸ್ವಾಗತಿಸಿ, ಕಾಂತಿ ಬಿ.ಎಸ್ ವಂದಿಸಿ, ಸಂಪಾಜೆ ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಕಾರ್ಯಕ್ರಮವನ್ನು ನಿರೂಪಿಸಿದರು.










