ಸುಬ್ರಹ್ಮಣ್ಯ: ಕೆ.ಎಸ್. ಎಸ್ ಕಾಲೇಜಿನಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ

0

ಅಧ್ಯಕ್ಷರಾಗಿ ಡಾl ರವಿ ಕಕ್ಕೆ ಪದವು ಆಯ್ಕೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ ಸುಬ್ರಹ್ಮಣ್ಯ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ಸೆ. 23 ರಂದು ರಕ್ಷಕ ಶಿಕ್ಷಕ ಸಂಘದ ಮಹಾಸಭೆಯನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವರಾಮ್ ರೈ ವಹಿಸಿದ್ದರು.


ಮುಖ್ಯ ಅತಿಥಿಯಾಗಿ ಸೈಂಟ್ ಫಿಲೋಮಿನಾ ಕಾಲೇಜ್ ಪುತ್ತೂರು ಇಲ್ಲಿನ ಸಹ ಪ್ರಾಧ್ಯಾಪಕರು ಡಾ. ನಾರ್ಬರ್ಟ್ ಮಸ್ಕರೇನಸ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿ,
ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಶ್ರೀಮತಿ ರೇವತಿ, ನೀಲಪ್ಪ, ಭವಾನಿ ಶಂಕರ್ ಹಾಗೂ ಮಾಸ್ಟರ್ ಪ್ಲಾನ್ ಸಮಿತಿಯ ಸದಸ್ಯರಾದ ಪವನ್ ಎಂ ಡಿ, ಕಾಲೇಜಿನ ಪ್ರಾಂಶುಪಾಲರಾದ ಡಾ.ದಿನೇಶ್ ಪಿ.ಟಿ , ಆಂತರಿಕ ಗುಣಮಟ್ಟ ಭರವಸ ಕೋಶದ ಸಂಯೋಜಕಿ ಶ್ರೀಮತಿ ಲತಾ ಬಿ. ಟಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ದಿನೇಶ್ ಕೆ ಉಪಸ್ಥಿತರಿದ್ದರು. ನೂತನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಡಾl ರವಿ ಕಕ್ಕೆ ಪದವು, ಉಪಾಧ್ಯಕ್ಷರಾಗಿ ಭವಾನಿ ಶಂಕರ್ ಹಾಗೂ ಸದಸ್ಯರಾಗಿ ವೆಂಕಟೇಶ್ ಎಚ್.ಎಲ್ ಹಾಗು ಶ್ರೀಮತಿ ನೇತ್ರಾವತಿ ಆಯ್ಕೆಗೊಂಡರು.ರಕ್ಷಕ ಶಿಕ್ಷಕ ಸಂಘದ ಸಂಯೋಜಕರಾದ ಡಾ. ಪ್ರಸಾದ್ ಎನ್ ಸ್ವಾಗತಿಸಿದರು, ಸಮಾಜಶಾಸ್ತ್ರ ಉಪನ್ಯಾಸಕಿ ಆರತಿ ನಿರೂಪಿಸಿ, ಸಿಬ್ಬಂದಿ ಕಾರ್ಯದರ್ಶಿ ಹಾಗು ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಪ್ರಮೀಳಾ ವಂದಿಸಿದರು.