⬆️ ಸೆ.26: ಭಜನಾ ಸಂಕೀರ್ತನೆ ಮತ್ತು ಭಕ್ತಿಗಾಯನ
ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ
ದುರ್ಗಾಪರಮೇಶ್ವರೀ ಅಮ್ಮನವರ ದೇಗುಲದಲ್ಲಿ ಅ. 1ರ ತನಕ ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ.















ಪ್ರತಿ ದಿನ ಬೆಳಿಗ್ಗೆ ಮಹಾಪೂಜೆ, ಮಧ್ಯಾಹ್ನ ಮಹಾಪೂಜೆ, ಸಂಜೆ 6.30 ರಿಂದ 7.45ರ ತನಕ ಭಜನಾ ಸಂಕೀರ್ತನೆ ,ರಾತ್ರಿ 8ಕ್ಕೆ ಮಹಾಪೂಜೆ, 8.10ರಿಂದ 8.30ರ ತನಕ ಕಲಾ ಸೇವೆ ನಡೆಯಲಿದೆ.

ಸೆ.25ರಂದು ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಕೇನ್ಯ ಇವರಿಂದ ಭಜನಾ ಸಂಕೀರ್ತನೆ.ಶ್ರೀ ಚಾಮುಂಡೇಶ್ವರಿ ಕುಣಿತ ಭಜನಾ ತಂಡ ಪಲ್ಲೋಡಿ, ಪಂಜ ಇವರಿಂದ’ ಕುಣಿತ ಭಜನೆ ನಡೆಯಿತು.ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ಗೌರವ ಸಲಹೆಗಾರರು, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.

ಸೆ.26ರಂದು ಪಂಜ ವಲಯ ಹವ್ಯಕ ಮಹಿಳಾ ತಂಡ ಇವರಿಂದ ಭಜನಾ ಸಂಕೀರ್ತನೆ, ಕು.ಶ್ರದ್ಧಾಲಕ್ಷ್ಮೀ ಪಂಜ ಮತ್ತು ಕು.ಶ್ರಿಯಾಶಂಕರಿ ಪಂಜ ಇವರಿಂದ ಭಕ್ತಿಗಾಯನ ನಡೆಯಲಿದೆ.
ಸೆ.27 ಶ್ರೀ ವಿಷ್ಣು ಭಜನಾ ಮಂಡಳಿ ಅಳ್ಪೆ ಚಿಂಗಾಣಿಗುಡ್ಡೆ ಇವರಿಂದ ಭಜನಾ ಸಂಕೀರ್ತನೆ,ಕು.ಸುಧಾ ಕೋಟೆ ಪಂಜ ಇವರಿಂದ ಭಕ್ತಿ ಸುಧೆ ನಡೆಯಲಿದೆ.
ಸೆ.28 ರಂದು ಪಂಚಶ್ರೀ ಭಜನಾ ಮಂಡಳಿ ಪಂಬೆತ್ತಾಡಿ ಇವರಿಂದ ಭಜನಾ ಸಂಕೀರ್ತನೆ,ವಿದುಷಿ ಕು.ಪೃಥ್ವಿ ಶೆಟ್ಟಿ ಮತ್ತು ಕು.ಚರಿಷ್ಮಾ ರೈ ಪಲ್ಲೋಡಿ ಇದರಿಂದ ಭರತನಾಟ್ಯ ನಡೆಯಲಿದೆ.
ಸೆ.29 ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ನಾಗತೀರ್ಥ ಇವರಿಂದ ಭಜನಾ ಸಂಕೀರ್ತನೆ, ಕು.ಹೇಮಸ್ವಾತಿ ಕುರಿಯಾಜೆ ಮತ್ತು ತಂಡದವರಿಂದ ‘ಭರತನಾಟ್ಯ’ ಮತ್ತು ಯಕ್ಷಗಾನ ಭಾಗವತಿಕೆ ನಡೆಯಲಿದೆ.
ಸೆ.30ರಂದು ಶಿವಳ್ಳಿ ಸಂಪದ ಪಂಜ ವಲಯ ಇವರಿಂದ ಭಜನಾ ಸಂಕೀರ್ತನೆ.
ವಿದುಷಿ ಮಾನಸ ಪುನೀತ್ ರೈ ಅವರ ಶಿಷ್ಯೆ ಆದ್ಯಾ ಬಾಬ್ಲುಬೆಟ್ಟು ಮತ್ತು ಸ್ನೇಹ ಪಿ. ರಾವ್ ಇವರಿಂದ ಭರತನಾಟ್ಯ ನಡೆಯಲಿದೆ.
ಅ.1ರಂದು ಯುವ ಸ್ಫೂರ್ತಿ ಕಲ್ಮಡ್ಕ ಇವರಿಂದ ಭಜನಾ ಸಂಕೀರ್ತನೆ, ಎ. ಕೆ. ಮೇಘನ್ ಆರ್ನೋಜಿ ಇವರಿಂದ ಕೊಳಲು ವಾದನ ನಡೆಯಲಿದೆ.
ಅ.1: ಆಯುಧ ಪೂಜೆ
ಅ.1 ರಂದು ಆಯುಧ ಪೂಜೆ-ವಾಹನಪೂಜೆ ಪೂರ್ವಾಹ್ನ ಗಂಟೆ 8.ರಿಂದ 1.30ರವರೆಗೆ ಹಾಗೂ ಸಂಜೆ 5.ರಿಂದ 9.ರವರೆಗೆ ನಡೆಯಲಿದೆ.ಉಳಿದ ದಿನಗಳಲ್ಲಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಮಹಾಪೂಜೆ ನಂತರ ನಡೆಯಲಿದೆ.ಪ್ರತಿ ದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ.










