ಬೆಳ್ಳಾರೆ ಲಕ್ಷ್ಮಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯು ಸೆ.20 ರಂದು ರಾಜೀವ ಗಾಂಧಿ ಸೇವಾ ಕೇಂದ್ರ ಬೆಳ್ಳಾರೆಯಲ್ಲಿ ನಡೆಯಿತು.
ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ.ಎಲ್ ರೈ ಕಾರ್ಯಕ್ರಮ ಉದ್ಘಾಟಿಸಿದರು.

ವೇದಿಕೆಯಲ್ಲಿ ಜಯಲಕ್ಷ್ಮೀ, ರಿತಿಕ್, ಮಣಿಕಂಠ, ಶಶಿಕಲಾ ಚಾವಡಿ ಬಾಗಿಲು, ಶ್ರೀಮತಿ ರೇಷ್ಮಾ, ಶ್ರೀಮತಿ ವೀಣಾ ಮುಡಾಯಿತೋಟ, ಶ್ರೀಮತಿ ಜಯಶ್ರೀ ಉಪಸ್ಥಿತರಿದ್ದರು.















ಶ್ರೀಮತಿ ಗೀತಾ ಲೆಕ್ಕ ಪತ್ರ ಮಂಡಿಸಿದರು.ಶ್ರೀಮತಿ ಇಂದಿರಾ ಪ್ರಾರ್ಥಿಸಿದರು. ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾರಾ ಸ್ವಾಗತಿಸಿ, ಗೀತಾ ಪ್ರೇಮ್ ವಂದಿಸಿದರು. ದಿವ್ಯಾ ಕಾರ್ಯಕ್ರಮ ನಿರೂಪಿಸಿದರು.
ಸ್ವ -ಉದ್ಯೋಗಕ್ಕಾಗಿ ಒಕ್ಕೂಟದಿಂದ ಸಾಲ ಪಡೆದ ಸಂಘಗಳಿಗೆ ಲಾಭಂಶದ ಚೆಕ್ ವಿತರಣೆ ಮಾಡಲಾಯಿತು. ವಿಶೇಷ ಚೇತನ ಸಂಘಕ್ಕೆ ಸ್ವ-ಉದ್ಯೋಗಕ್ಕೆ ಚೆಕ್ ವಿತರಣೆ ಹಾಗೂ ಮಾದಕ ವ್ಯಸನ ಮುಕ್ತ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಿದರು.
ನೂತನ ಪದಾಧಿಕಾರಿಗಳ ಆಯ್ಕೆ:
2025-2026 ನೇ ಸಾಲಿನ ಪದಾಧಿಕಾರಿಗಳಾಗಿ ಅಧ್ಯಕ್ಷೆಯಾಗಿ ಶ್ರೀಮತಿ ಮಮತಾ ಪಡ್ಪು, ಉಪಾಧ್ಯಕ್ಷೆ ಶ್ರೀಮತಿ ಲಲಿತಾ ಪಡ್ಪು, ಕಾರ್ಯದರ್ಶಿ ಶ್ರೀಮತಿ ಅನಿಸಾ, ಖಜಾಂಜಿ ಶ್ರೀಮತಿ ಮಿಶ್ರಿಯಾ, ಜತೆ ಕಾರ್ಯದರ್ಶಿ ಶ್ರೀಮತಿ ಶೋಭನಾ ಪನ್ನೆ ಇವರನ್ನು ಆಯ್ಕೆ ಮಾಡಲಾಯಿತು.










