ಮುಂದುವರಿದಲ್ಲಿ ಎರಡನೆಯ ಕಲ್ಚರ್ಪೆ ಆಗುವ ಸಂಭವ?
ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜ್ ಇದರ ಕ್ರೀಡಾಂಗಣದ ಮುಂಭಾಗದ ಕಸ್ತೂರಿ ನಿಲಯ ತೋಟದ ಬದಿಯಲ್ಲಿ ಯಾರೋ ಕಿಡಿಗೇಡಿಗಳು ಕಸದ ರಾಶಿಯನ್ನು ಹಾಕುತ್ತಿದ್ದು ಪರಿಸರ ಅಸ್ವಚ್ಛತೆಯಿಂದ ಕಂಡುಬರುತ್ತಿದೆ.

ತ್ಯಾಜ್ಯ ತುಂಬಿದ ಕಟ್ಟುಗಳು, ಪ್ಲಾಸ್ಟಿಕ್ ವಸ್ತುಗಳು ಎಲ್ಲೆಂದರಲ್ಲಿ ಉದ್ದಕ್ಕೆ ಬಿದ್ದಿದ್ದು ಗಾಳಿಗೆ ಅಲ್ಲಿಂದ ಪಕ್ಕದ ರಸ್ತೆಗೆ ಹಾರಿ ಬರುತ್ತಿದೆ.















ಈ ಬಗ್ಗೆ ಸುಳ್ಯ ನಗರ ಪಂಚಾಯತ್ ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಎರಡನೇಯ ಕಲ್ಚರ್ಪೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.










