ಪಂಜಿಗುಂಡಿ ಬಳಿ ಎರಡು ಕಾರುಗಳ ಮುಖಾಮುಖಿ ಡಿಕ್ಕಿ, ಗುತ್ತಿಗಾರು ಮೂಲದವರಿಗೆ ಗಾಯ, ಆಸ್ಪತ್ರೆಗೆ ದಾಖಲು

0

ಪಂಜಿಗುಂಡಿ ಬಳಿ ಎರಡು ಕಾರುಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಗುತ್ತಿಗಾರು ಮೂಲದ ಮೂವರಿಗೆ ಗಾಯಗೊಂಡು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಸೆ 29 ರಂದು ವರದಿಯಾಗಿದೆ.

ಸುಳ್ಯದಿಂದ ಮಂಗಳೂರು ಕಡೆ ಹೋಗುತ್ತಿದ್ದ ಬೊಲೇನೋ ಕಾರು ಹಾಗೂ ಪುತ್ತೂರಿನಿಂದ ಗುತ್ತಿಗಾರು ಕಡೆಗೆ ಬರುತ್ತಿದ್ದ ಆಲ್ಟೊ ಕಾರು ನಡುವೆ ಈ ಅಪಘಾತ ಸಂಭವಿಸಿದೆ.
ಘಟನೆಯಿಂದ ಎರಡು ಕಾರುಗಳು ಜಖಂ ಗೊಂಡಿದ್ದು ಬೋಲೇನೋ ಕಾರು ಚಾಲಕನಿಗೂ ಸೇರಿ ಆಲ್ಟೊ ಕಾರಿನಲ್ಲಿದ್ದ ಮೂವರಿಗೂ ಗಾಯವಾಗಿದ್ದು ಅವರೆಲ್ಲರನ್ನೂ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದೆ ಎಂದು ತಿಳಿದುಬಂದಿದೆ.