ಸುಳ್ಯ ಆಲ್ಟೋ ಹಾಗೂ ಇನೋವಾ ಕಾರು ಡಿಕ್ಕಿ, ವಾಹನಗಳು ಜಖಂ

0

ಸುಳ್ಯದಿಂದ ಮಡಿಕೇರಿ ಕಡೆ ಚಲಿಸುತ್ತಿದ್ದ ಇನೋವಾ ಕಾರು ಮತ್ತು ಅದರ ಹಿಂದೆ ಹೋಗುತ್ತಿದ್ದ ಆಲ್ಟೋ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಎರಡು ಕಾರುಗಳು ಜಖಂ ಗೊಂಡು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಇದೀಗ ವರದಿಯಾಗಿದೆ.

ಸುಳ್ಯ ಪೊಲೀಸ್ ಠಾಣೆಯ ಮುಂಭಾಗ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು ಮುಂಭಾಗದಿಂದ ಹೋಗುತ್ತಿದ್ದ ಇನ್ನೋವಾ ಕಾರು ಏಕಾಏಕಿ ತಿರುಗಿಸಿದಾಗ ಆಲ್ಟೊ ಕಾರಿನವರು ನಿಯಂತ್ರಣ ತಪ್ಪಿ ಮುಂಭಾಗದಲ್ಲಿ ಹೋಗುತ್ತಿದ್ದ ಇನೋವಾ ಕಾರಿಗೆ ಗುದ್ದಿದೆ ಎನ್ನಲಾಗಿದೆ.