ಪಂಜದಲ್ಲಿ 16ನೇ ವರುಷದ ಶ್ರೀ ಶಾರದೋತ್ಸವ: ಕ್ರೀಡಾ -ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ

0

ಉತ್ಸವ – ಆಚರಣೆಗಳಿಂದ ಧಾರ್ಮಿಕ ನಂಬಿಕೆ ಗಟ್ಟಿಯಾಗುತ್ತದೆ : ಮಾಧವ ಗೌಡ

ಶ್ರೀ ಶಾರದಾಂಬಾ ಭಜನಾ ಮಂಡಳಿ (ರಿ)ಪಂಜ, ಶ್ರೀ ಶಾರದೋತ್ಸವ ಸಮಿತಿ -2025 ಇದರ ಆಶ್ರಯದಲ್ಲಿ ಪಂಜ ಪರಿಸರದ ನಾಡ ಹಬ್ಬ 16ನೇ ಶ್ರೀ ಶಾರದೋತ್ಸವ-2025 ಅ.1 ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಆರಂಭ ಗೊಂಡಿದೆ. ಪೂ.ಗಂಟೆ 8.21ಕ್ಕೆ ಪ್ರತಿಷ್ಠೆ, ಭಜನೆ, ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ನಡೆಯಿತು.

ಶ್ರೀ ಕ್ಷೇತ್ರ ಧ.ಗ್ರಾ.ಯೋ. (ರಿ) ಬಿ.ಸಿ. ಟ್ರಸ್ಟ್ ಯೋಜನಾಧಿಕಾರಿ ಮಾಧವ ಗೌಡ ಉದ್ಘಾಟಿಸಿ ಮಾತನಾಡಿ ” ಸಂಸ್ಕಾರ, ಸಂಸ್ಕೃತಿಯನ್ನು ಎಲ್ಲರೂ ಮೈಗೂಡಿಸಿಕೊಂಡು ಮುಂದಿನ ಪೀಳಿಗೆಗೆ ಧಾರೆ ಎರೆಯ ಬೇಕು. ಉತ್ಸವ, ಆಚರಣೆಗಳಿಂದ ಧಾರ್ಮಿಕ ನಂಬಿಕೆಗಳು ಗಟ್ಟಿಯಾಗುತ್ತದೆ. ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ”. ಎಂದು ಹೇಳಿದರು.

ಸಭಾಧ್ಯಕ್ಷತೆಯನ್ನು ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ದಾಮೋದರ ಗೌಡ ಪಲ್ಲೋಡಿ ವಹಿಸಿದ್ದರು. ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಗೌರವಾಧ್ಯಕ್ಷ ಮಾಧವ ಗೌಡ ಜಾಕೆ, ಸಾಂಸ್ಕೃತಿಕ ಸ್ಪರ್ಧೆಗಳ ಸಂಚಾಲಕಿ ಶ್ರೀಮತಿ ಸರೋಜಿನಿ ಕೆಮ್ಮೂರು, ಉತ್ಸವ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಣ ಗೌಡ ಬೇರ್ಯ, ಜೊತೆ ಕಾರ್ಯದರ್ಶಿ ಶ್ರೀಮತಿ ಸುಮಾ ಕುದ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ಯಾಮ ಕೃಷ್ಣನಗರ ಪ್ರಾರ್ಥಿಸಿದರು. ಲೋಕೇಶ್ ಬರೆಮೇಲು ಸ್ವಾಗತಿಸಿದರು. ಜಯರಾಮ ಕಲ್ಲಾಜೆ ನಿರೂಪಿಸಿದರು. ಶ್ರೀಮತಿ ಸುಮಾ ಕುದ್ವ ವಂದಿಸಿದರು.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ. ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸಾಂಸ್ಕೃತಿಕ ಕಾರ್ಯಕ್ರಮ:

ಅ. ಗಂ. 1ರಿಂದ 2 ತನಕ ರಂಜನಿ ಸಂಗೀತ ಸಭಾ ಎಲಿಮಲೆ (ರಿ.) ಪಂಜ ಶಾಖೆಯ ವಿದ್ಯಾರ್ಥಿಗಳಿಂದ ಸಂಗೀತ ಗುರುಗಳಾದ ಶ್ರೀಮತಿ ರೇಖಾ ಹೊನ್ನಾಡಿ ಇವರ ನಿರ್ದೇಶನದಲ್ಲಿ ಸ್ವರ ರಾಗ ಸುಧಾ ಕಾರ್ಯಕ್ರಮ. ಅ.ಗಂ.2.ರಿಂದ 3 ತನಕ ವಿಶ್ವ ಕಲಾನಿಕೇತನ ಕಲ್ಚರಲ್ & ಆರ್ಟ್ಸ್ ಪುತ್ತೂರು, ಪಂಜ ಶಾಖೆ ಇದರ ವಿದ್ಯಾರ್ಥಿಗಳಿಂದ ಭರತನಾಟ್ಯ (ನಿರ್ದೇಶನ: ಕರ್ನಾಟಕ ಕಲಾಶ್ರೀ, ವಿಧೂಷಿ ನಯನ ವಿ. ರೈ, ವಿಧೂಷಿ ಸ್ವಸ್ತಿಕಾ ಆರ್. ಶೆಟ್ಟಿ), ಅ. ಗಂ.3 ರಿಂದ 4 ತನಕ ಕಲಾ ಮಂದಿರ್ ಡ್ಯಾನ್ಸ್ ಕ್ರಿವ್ ಬೆಳ್ಳಾರೆ ಮತ್ತು ಪಂಜ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯಸಂಭ್ರಮ (ಸಂಯೋಜನೆ :ಪ್ರಮೋದ್ ರೈ ಬೆಳ್ಳಾರೆ, ನಿರ್ದೇಶನ: ಅಶೋಕ್ ಬೆಳ್ಳಾರೆ) ನಡೆಯಲಿದೆ.

ವೈಭವದ ಶೋಭಾಯಾತ್ರೆ:

ಸಂಜೆ 4.30 ರಿಂದ ಶ್ರೀ ಶಾರದಾಮಾತೆಯ ಶೋಭಾಯಾತ್ರೆ-ಜಲಸ್ತಂಭನ ನಡೆಯಲಿದೆ. ಅನೇಕ ಕುಣಿತ ಭಜನೆ ತಂಡಗಳು ಮತ್ತು ಭಜನೆ, ನಾಸಿಕ್ ಬ್ಯಾಂಡ್ ಪ್ರದರ್ಶನ ವಿಶೇಷ ಆಕರ್ಷಣೆಯಾಗಲಿದೆ.