177 ಫಲಾನುಭವಿಗಳು ಪ್ರಯೋಜನ ಪಡೆದುಕೊಂಡವರು
ಬಹು ಬೇಡಿಕೆ, ಅ.3 ಮತ್ತು 4 ರಂದು ಮತ್ತೆ ಶಿಬಿರ ಆಯೋಜಿಸಲು ತಯಾರಿ
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉಚಿತ ಆಧಾರ್ ನೋಂದಣಿ ತಿದ್ದುಪಡಿ ಕಾರ್ಯಕ್ರಮ , ಆರೋಗ್ಯ ಮತ್ತು ಅಪಘಾತ ವಿಮಾ ನೋಂದಣಿ ಕಾರ್ಯಕ್ರಮ
ಸೆ.29 ಮತ್ತು 30 ರಂದು ನಡೆದು 177 ಜನ ಫಲಾನುಭವಿಗಳು ಇದರ ಸದುಪಯೋಗ ಪಡೆದು ಕೊಂಡರುವುದಾಗಿ ತಿಳಿದು ಬಂದಿದೆ.. ಇದರೊಂದಿಗೆ ಸಾರ್ವಜನಿಕರ ಭೇಡಿಕೆಯಂತೆ ಮತ್ತೆ ಅ.3 ಮತ್ತು 4 ರಂದು ಇದೇ ಶಿಬಿರವನ್ನು ಆಯೋಜಿಸಲು ಸುಬ್ರಹ್ಮಣ್ಯ ಗ್ರಾ.ಪಂ ನಿರ್ಧರಿಸುವುದಾಗಿ ತಿಳಿದು ಬಂದಿದೆ.
















ಭಾರತೀಯ ಅಂಚೆ ಇಲಾಖೆ ಪುತ್ತೂರು ಉಪ ವಿಭಾಗದ ಜಂಟಿ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮ ಇದಾಗಿದೆ.
ಗ್ರಾಮ ಪಂಚಾಯತ್ ಹಾಗೂ ಆಸುಪಾಸಿನ ದೂರ ದೂರುಗಳಿಂದ ಜನ ಆಗಮಿಸುತ್ತಿರುವ ಕಾರಣ, ಇನ್ನಷ್ಟು ಬೇಡಿಕೆಯೂ ಬಂದ ಕಾರಣ ಅಂಚೆ ಇಲಾಖೆಗೆ ಶಿಬಿರ ಮುಂದುವರೆಸಲು ಮನವಿ ಮಾಡಲಾಗಿದ್ದು ಅದರಂತೆ ಮತ್ತೆ ಎರಡು ದಿನ ಶಿಬಿರ ನಡೆಸಲು ಒಪ್ಪಿಕೊಂಡಿದ್ದಾರೆ. ಪಂಚಾಯತ್ ವತಿಯಿಂದ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ , ನಾಳಿದ್ದು ಹೆಚ್ಚುವರಿ ಕಂಪ್ಯೂಟರ್ ಸಿಸ್ಟಮ್ ಇರಲಿದ್ದು ಹೆಚ್ಚಿನ ಜನರು ಸದುಪಯೋಗ ಪಡೆದುಕೊಳ್ಳುವಂತೆ ಪಂಚಾಯತ್ ನ ಉಪಾಧ್ಯಕ್ಷ ರಾಜೇಶ್ ಎನ್ .ಎಸ್ ತಿಳಿಸಿದ್ದಾರೆ.










