ದೈವದ ಗುಡಿಯ ಮೇಲೆ ಬಿದ್ದು ಕಾರು ಮತ್ತು ಗುಡಿ ಜಖಂ
ಕಾರಿನ ನಿಯಂತ್ರಣ ತಪ್ಪಿ ದೈವದ ಗುಡಿಯ ಮೇಲೆ ಬಿದ್ದು ಗುಡಿ ಮತ್ತು ಕಾರು ಜಖಂಗೊಂಡ ಘಟನೆ ದೊಡ್ಡತೋಟ ಬಳಿಯ ಇಂತಿಕಲ್ಲು ಎಂಬಲ್ಲಿಂದ ವರದಿಯಾಗಿದೆ.















ಏರು ರಸ್ತೆಯಲ್ಲಿ ಕಾರಿನ ನಿಯಂತ್ರಣ ತಪ್ಪಿ ಕೆಳಭಾಗದಲ್ಲಿ ಇದ್ದ ಚನಿಯ ಎಂಬವರಿಗೆ ಸೇರಿದ ದೈವದ ಗುಡಿಯ ಮೇಲೆ ಬಿದ್ದಿದೆ. ಪರಿಣಾಮ ಗುಡಿ ಮತ್ತು ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದವರಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.










