ಐವರ್ನಾಡು ಸಹಕಾರಿ ಸಂಘದ ಸಭಾಭವನದಲ್ಲಿ ಉಚಿತ ಯೋಗ ಶಿಬಿರ ಪ್ರಾರಂಭ

0

ಐವರ್ನಾಡು ಗ್ರಾಮದ ಯೋಗ ಆಸಕ್ತರಿಗೆ ಸುವರ್ಣಾವಕಾಶ

ಇಂದಿರಾ ಹೆಲ್ತ್ ಟ್ರಸ್ಟ್ ಹಾಸನಡ್ಕ ಆರೋಗ್ಯಧಾಮ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಐವರ್ನಾಡು, ಹಾಗೂ ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ ಐವರ್ನಾಡು ಇದರ ಆಶ್ರಯದಲ್ಲಿ ಅ.6 ರಿಂದ ಅ.12 ರವರೆಗೆ ಒಂದು ವಾರಗಳ ಕಾಲ ನಡೆಯುವ ಯೋಗ ಶಿಬಿರ ಹಾಗೂ ಯೋಗ ಚಿಕಿತ್ಸೆಗೆ ಅ.06 ರಂದು ಚಾಲನೆ ನೀಡಲಾಯಿತು.
ಸಹಕಾರಿ ಸಂಘದ ಮಾಜಿ ನಿರ್ದೇಶಕರಾದ ಕುಸುಮಾಧರ ಮಡ್ತಿಲ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಐವರ್ನಾಡು ಇದರ ಅಧ್ಯಕ್ಷರಾದ ಎಸ್.ಎನ್. ಮನ್ಮಥ, ಉಪಾಧ್ಯಕ್ಷರಾದ ಮಹೇಶ್ ಜಬಳೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದೀಕ್ಷಿತ್‌ಎಂ.ಎಚ್, ನಿರ್ದೇಶಕರಾದ, ಗೋಪಾಲಕೃಷ್ಣ ಚೆಮ್ನೂರು, ರವಿನಾಥ ಮಡ್ತಿಲ, ನಟರಾಜ್ ಸಿ.ಕೂಪ್, ಭವಾನಿಶೇಖರ ಮಡ್ತಿಲ, ಶೇಖರ ಕೊಯಿಲ, ಹಾಗೂ ಯೋಗಾಸಕ್ತರಾದ ಶೇಖರ ಮಡ್ತಿಲ, ಶಾಂತರಾಮ ಕಣಿಲೆಗುಂಡಿ, ರೋಹಿತ್ ಬಾಂಜಿಕೋಡಿ, ಸುಧಾಕರ ಕಲ್ಲಗದ್ದೆ, ಧರ್ಮಪಾಲ ಲಾವಂತಡ್ಕ, ಜಯಪ್ರಸಾದ್ ಕಜೆತ್ತಡ್ಕ, ಅಜಿತ್ ನಿಡುಬೆ, ಅನಿಲ್ ದೇರಾಜೆ, ಸಚಿನ್ ಪಾಲೆಪ್ಪಾಡಿ,ಗೋಪಿನಾಥ ಪಾಲೆಪ್ಪಾಡಿ, ರಾಜೇಶ್ ಮಡ್ತಿಲ, ನಾರಾಯಣ ಉದ್ದಂಪಾಡಿ, ರವೀಂದ್ರ ಮಡ್ತಿಲ, ಸೋಮಶೇಖರ ಪವಿತ್ರಮಜಲು, ಅಶ್ವಿನಿಮನ್ಮಥ, ಕುಸುಮಾವತಿ ಮಡ್ತಿಲ, ದೇವಕಿ ಚೆಮ್ನೂರು, ರಶ್ಮಿತಾ ಬಾಂಜಿಕೋಡಿ, ಸುಜಾತ ಪವಿತ್ರಮಜಲು, ಮಮತಾ ಉದ್ದಂಪಾಡಿ, ಮಮತಾ ಮಡ್ತಿಲ ಹಾಗೂ ಅನೇಕ ಹಿರಿಯ ಕಿರಿಯ ಗ್ರಾಮಸ್ಥರು ಹಾಜರಿದ್ದರು.


ಯೋಗ ಶಿಕ್ಷಕರಾದ ಡಾ. ಶಶಿಧರ್ ಹಾಸನಡ್ಕ ಹಾಗೂ ಡಾ.ಅನುಪಮ ಶಶಿಧರ್ ಹಾಸನಡ್ಕ ಇವರು ಯೋಗ ಆರೋಗ್ಯದ ಬಗ್ಗೆ ಮಾಹಿತಿ ನೀಡಿ, ಸೂರ್ಯನಮಸ್ಕಾರ, ಯೋಗಾಸಾನ, ಪ್ರಾಣಾಯಾಮ ಮಾಡಿಸಲಾಯಿತು.


ಪ್ರತಿದಿನ ಮುಂಜಾನೆ, 5 ಗಂಟೆಯಿಂದ 6 ರವರೆಗೆ ಹಾಗೂ ಸಂಜೆವ 6 ಗಂಟೆಯಿಂದ 7 ಗಂಟೆವರೆಗೆ ಎರಡು ಬ್ಯಾಚುಗಳಲ್ಲಿ ಯೋಗಾಭ್ಯಾಸ ನಡೆಯಲಿದೆ.
ದಿನಾಂಕ 12.10.2025ರಂದು ಯೋಗ ಶಿಬಿರ ಸಮಾಪನೆಗೊಳ್ಳಲಿದೆ.