
ಕಲರ್ಸ್ ಈಗಲ್ಸ್ ಪಂಜ ವತಿಯಿಂದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟವು ಅ.5 ರಂದು ಪಂಜ ನಾಗತೀರ್ಥ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ನಡೆಯಿತು.
ಪಂಜ ಕಲರ್ಸ್ ಈಗಲ್ಸ್ ಮಾಲಕರಾದ ಭರತ್ ಕೊಟ್ರಂಜ ಸಭಾಧ್ಯಕ್ಷತೆ ವಹಿಸಿದ್ದರು.ಕೆಂಚಪ್ಪ ಗೌಡ ನೆಕ್ಕಿಲ ಉದ್ಘಾಟಿಸಿದರು.
















ಅಮೋಘ ನಾಗತೀರ್ಥ ಪ್ರಾರ್ಥಿಸಿದರು. ಸಂಜೆ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಕಲರ್ಸ್ ಈಗಲ್ಸ್ ಮಾಲಕ ಭರತ್ ಕೊಟ್ರಂಜ ವಹಿಸಿದ್ದರು. ಅತಿಥಿಗಳಾಗಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಕಾನತ್ತೂರ್ , ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ , ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಿತೇಶ್ ಪಂಜದಬೈಲು , ಯುವಜನ ಸಂಯುಕ್ತ ಮಂಡಳಿ ಕ್ರೀಡಾ ಕಾರ್ಯದರ್ಶಿ ತೀರ್ಪುಗಾರರಾದ ಜನಾರ್ಧನ ನಾಗತೀರ್ಥ , ಎಂ.ಡಿ ಪ್ರಶಾಂತ್, ವರ್ಷಿತ್ ಪಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂದ್ಯಾಕೂಟದಲ್ಲಿ ಪ್ರಥಮ ಬಹುಮಾನವನ್ನು ತ್ರಿಶೂಲ್ ದರ್ಕಾಸು, ದ್ವಿತೀಯ ಬಹುಮಾನವನ್ನು ಶೈನ್ ಅ್ಯಟಕರ್ಸ್ ಪುಣಚ, ತೃತೀಯ ಬಹುಮಾನವನ್ನು ಸಿಗ್ನೇಚರ್ ವಾಲ್ತಾಜೆ, ಚತುರ್ಥ ಬಹುಮಾನ ಫ್ರೆಂಡ್ಸ್ ಎಲಿಮಲೆ, ಪೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಬಹುಮಾನ ತ್ರಿಶೂಲ್ ದರ್ಕಾಸು ತಂಡದ ಮೌಶಿಕ್ , ಉತ್ತಮ ಹೊಡೆತಗಾರ ಪ್ರಶಸ್ತಿಯು ಶೈನ್ ಅ್ಯಟಕರ್ಸ್ ಪುಣಚ ತಂಡದ ನವೀನ್ ಕಾಸರಗೋಡು, ಉತ್ತಮ ಎಸೆತಗಾರ ಶೈನ ಅ್ಯಟಕರ್ಸ್ ಪುಣಚ ತಂಡದ ಕೇಶವ್, ಉತ್ತಮ ಕ್ಷೇತ್ರರಕ್ಷಕ ತ್ರಿಶೂಲ್ ದರ್ಕಾಸು ತಂಡದ ಹೈದರ್ ಬೆಳ್ಳಾರೆ, ಸರಣಿ ಶ್ರೇಷ್ಠ ಪ್ರಶಸ್ತಿಯು ತ್ರಿಶೂಲ್ ದರ್ಕಾಸು ತಂಡದ ಅಚ್ಚು ದರ್ಕಾಸು.

ಕಾರ್ಯಕ್ರಮದಲ್ಲಿ ಯತೀಶ್ ನಾಗತೀರ್ಥ ಸ್ವಾಗತಿಸಿದರು, ಜೀವನ್ ಜಳಕದಹೊಳೆ ವಂದಿಸಿದರು, ಪುರಂದರ ಶೆಟ್ಟಿ ನಾಗತೀರ್ಥ ನಿರೂಪಿಸಿದರು.











