ಸುಳ್ಯ ಸರಕಾರಿ ಆಸ್ಪತ್ರೆಗೆ ಫ್ಯಾನ್ ಕೊಡುಗೆ

0

ಸುಳ್ಯ ಸರಕಾರಿ ಆಸ್ಪತ್ರೆಗೆ ಕಾಸರಗೋಡಿನ ಸುನಿಲ್ ಕೇಳುಗುಡ್ಡೆ ಕರಂದಕಾಡುರವರು ಫ್ಯಾನ್‌ನ್ನು ಕೊಡುಗೆಯಾಗಿ ನೀಡಿದರು.

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ರಾಧಾಕೃಷ್ಣ ಪರಿವಾರಕಾನರವರ ಸಂಬಂಧಿ ಕಾಸರಗೋಡಿನ ಸುನಿಲ್ ಕೇಳುಗುಡ್ಡೆ ಕರಂದಕಾಡುರವರು ಡಾ. ನವೀನ್‌ರವರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆಯನ್ನು ಪಡೆದು ಗುಣಮುಖರಾಗಿದ್ದರು. ಅಲ್ಲಿಯೇ ಹತ್ತಿರವಿದ್ದ ಹೆರಿಗೆ ಕೊಠಡಿಯಲ್ಲಿ ಕುಳಿತುಕೊಳ್ಳುವ ಮಹಿಳೆಯರಿಗೆ ಫ್ಯಾನ್‌ನ ಅವಶ್ಯಕತೆ ಇದ್ದು, ಇದನ್ನು ಸುನಿಲ್‌ರವರು ಗಮನಿಸಿ ಫ್ಯಾನನ್ನು ಕೊಡುಗೆಯಾಗಿ ನೀಡದರು.
ಈ ಸಂದರ್ಭದಲ್ಲಿ ಡಾ. ನವೀನ್, ರಾಧಾಕೃಷ್ಣ ಪರಿವಾರಕಾನ ಇದ್ದರು.