ಶೋಭಾಯಾತ್ರೆಯಲ್ಲಿ ಸಾಗಿ ಬಂದ ಭಕ್ತರಿಗೆ ಪಾನಕ ಮತ್ತು ಅನ್ನಸಂತರ್ಪಣೆ
ಸುಳ್ಯ ದಸರಾ 2025 ರ ಅಂತಿಮ ದಿನದಂದು
ಶ್ರೀ ಶಾರದಾ ಮಾತೆಯ
ವೈಭವದ ಶೋಭಾಯಾತ್ರೆಸಾಗಿ ಬರುವ ಸಂದರ್ಭದಲ್ಲಿ ಓಡಬಾಯಿ ಬಳಗದ ವತಿಯಿಂದ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದ ಎದುರಿನಲ್ಲಿ ಸುಳ್ಯದ ಖ್ಯಾತ ಆರ್ಕೆಸ್ಟ್ರಾ ತಂಡ ಶಿವ ಸ್ವರ ಮೇಲೋಡಿಸ್ ರವರ ಕಲಾವಿದರ ಕೂಡುವಿಕೆಯಲ್ಲ ಅದ್ದೂರಿಯ ಗಾನ ವೈಭವ
ಕಾರ್ಯಕ್ರಮವು ಅ. 7 ರಂದು ನಡೆಯಿತು.

ಸಂಜೆ 6.00 ಗಂಟೆಯಿಂದ ಆರಂಭಗೊಂಡ ಸಂಗೀತ ಕಾರ್ಯಕ್ರಮಶೋಭಾಯಾತ್ರೆಯು ಹಿಂತಿರುಗಿ ಹೋಗುವ ತನಕ ಪ್ರದರ್ಶನವಾಯಿತು.









ಶೋಭಾಯಾತ್ರೆಯಲ್ಲಿ
ಸಾಗಿ ಬಂದ ಎಲ್ಲಾ ಸಾರ್ವಜನಿಕರಿಗೆ ಒಡಬಾಯಿ ಬಳಗದವರಿಂದ
ಪಾನಕದ ವ್ಯವಸ್ಥೆ
ಹಾಗೂ ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆಯು ಸಂಘಟಕರಲ್ಲಿ ಓರ್ವರಾದ ಶ್ರೀಮತಿ ಶಶಿಕಲಾ ಶುಭಕರ ರಾವ್ ರವರ ವತಿಯಿಂದ ಏರ್ಪಡಿಸಲಾಗಿತ್ತು. ಸುಮಾರು 2 ಸಾವಿರಕ್ಕೂ ಮಿಕ್ಕಿ ಭಕ್ತರು ಭೋಜನ ಸ್ವೀಕರಿಸಿದರು.
ಓಡಬಾಯಿ ಬಳಗದ ಸಂಘಟಕರಾದ ಹಿರಿಯ ಉದ್ಯಮಿ ಸುಂದರ ರಾವ್, ಇಂಜಿನಿಯರ್ ದೇವಿಪ್ರಸಾದ್,ಉದ್ಯಮಿ ಸಂತೋಷ್ ಕುಂಭಕೋಡು, ಕಿರಣ್ ಐಡಿಯಲ್ ಟಿವಿಎಸ್, ಕಿಶನ್ ಹಾಗೂ ಒಡಬಾಯಿ ಪರಿಸರದ ವ್ಯಾಪಾರಸ್ಥರು, ಉದ್ಯಮಿಗಳು, ಟಿ.ವಿ.ಎಸ್, ಮಂಡೋವಿ ಮೋಟಾರ್ಸ್, ಅದ್ವೈತ್ ಹುಂಡಾಯಿಯ ಮ್ಯಾನೇಜರ್ಸ್ ಮತ್ತು
ಸಿಬ್ಬಂದಿಗಳು ಕಾರ್ಯಕ್ರಮ ದ ಯಶಸ್ಸಿಗೆ ಸಹಕರಿಸಿದರು.
ನಿಗದಿ ಪಡಿಸಿದ ಸಮಯಕ್ಕೆ ರಾತ್ರಿ 10 ಗಂಟೆಗೆ ಸರಿಯಾಗಿ ಕಾರ್ಯಕ್ರಮವನ್ನುಮುಕ್ತಾಯ ಮಾಡಲಾಯಿತು.








