ಶ್ರೀಮತಿ ಚಂದ್ರಾವತಿ ಕೂಟೇಲು ನಿಧನ

0

ಆಲೆಟ್ಟಿ ಗ್ರಾಮದ ಕೂಟೇಲು ನಿವಾಸಿ ದಿ.ಗೋಪಾಲಕೃಷ್ಣ ನಾಯ್ಕ ಎಂಬವರ ಪತ್ನಿ ಶ್ರೀಮತಿ ಚಂದ್ರಾವತಿ ಅ.6 ರಂದು ನಿಧನರಾದರು. ಅವರಿಗೆ ಸುಮಾರು 86 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಜಗದೀಶ್, ವಿನೋದ್ ಕುಮಾರ್, ಪುತ್ರಿಯರಾದ ಜಯಲಲಿತಾ, ವೇದಾವತಿ, ಅರುಣಕುಮಾರಿ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಮತ್ತು ಬಂಧುಗಳನ್ನು ಅಗಲಿದ್ದಾರೆ.