ತೊಡಿಕಾನ – ಪಟ್ಟಿ – ಭಾಗಮಂಡಲ ರಸ್ತೆ ಅಭಿವೃದ್ಧಿಗೆ ಉಂಟಾಗಿರುವ ಕಾನೂನಿನ ತೊಡಕು ನಿವಾರಿಸಲು ಹಾಗೂ ಸೋಲಾರ್ ಬೇಲಿ ಅಳವಡಿಕೆಗೆ ಸಹಾಯ ಧನ ಹೆಚ್ಚಿಸಲು ಮನವಿ
ಅರಣ್ಯ ಇಲಾಖೆಯ ಆಕ್ಷೇಪಣೆ ಯಿಂದ ಪ್ರಸ್ತುತ ನೆನೆಗುದಿಗೆ ಬಿದ್ದಿರುವ ಬಹುಕಾಲದ ಬೇಡಿಕೆಯ ಅರಂತೋಡು -ತೊಡಿಕಾನ -ಪಟ್ಟಿ- ಭಾಗಮಂಡಲ ರಸ್ತೆ ಅಭಿವೃದ್ಧಿಗೆ ಉಂಟಾಗಿರುವ ಕಾನೂನಿನ ತೊಡಕುಗಳನ್ನು ನಿವಾರಿಸಲು ಹಾಗೂ ಸೋಲಾರ್ ಬೇಲಿ ಅಳವಡಿಕೆಗೆ 75% ಇಲಾಖೆಯಿಂದ ಸಹಾಯಧನ ಒದಗಿಸಲು ಶಾಸಕಿ ಭಾಗೀರಥಿ ಮುರುಳ್ಯ ನೇತೃತ್ವದಲ್ಲಿ ಅ.9 ರಂದು ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಭೇಟಿ ನೀಡಿ ಮನವಿ ಸಲ್ಲಿಸಲಾಯಿತು.















ಈ ವೇಳೆ ಸಂಪಾಜೆ ಅರಂತೋಡು ತೊಡಿಕಾನ, ಪೆರಾಜೆ ಉಬರಡ್ಕ ಆಲೆಟ್ಟಿ ಸೇರಿದಂತೆ ಸುಳ್ಯ ತಾಲೂಕು ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಆನೆ ಹಾವಳಿಯಿಂದ ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದು, ಹಾನಿಗೊಳಗಾದ ಕೃಷಿಕರಿಗೆ ಇಲಾಖೆಯಿಂದ ನಷ್ಟ ಪರಿಹಾರ ಒದಗಿಸುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಅರಂತೋಡು- ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ , ಪ್ರಸಾದ್ ಕಾಟೂರು ಮೊದಲಾದವರು ಉಪಸ್ಥಿತರಿದ್ದರು.










