ಯುವಜನ ಸಂಯುಕ್ತ ಮಂಡಳಿ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ

0

ಯುವಜನ ಸಂಯುಕ್ತ ಮಂಡಳಿ (ರಿ ) ಸುಳ್ಯ ಹಾಗೂ ಶೌರ್ಯ ಯುವತಿ ಮಂಡಲ (ರಿ) ಪೈಲಾರು ಇದರ ಜಂಟಿ ಆಶ್ರಯದಲ್ಲಿ ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ-2025 ಇದರ 75 ದಿನಗಳ ಸ್ವಚ್ಛತಾ ಕಾರ್ಯಕ್ರಮಕ್ಕೆ ನಾರಾಯಣ ಕೊಡ್ತುಗುಳಿ, ಕೃಷ್ಣ ಪ್ರಸಾದ್ ಮಾಡಬಾಕಿಲು, ಆಶಾ ಕಾರ್ಯಕರ್ತೆ ಪ್ರೇಮ ಗೋಳಿಯಾಡಿ ಮತ್ತು ಯುವತಿ ಮಂಡಲದ ಸದಸ್ಯರ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು.

ಯುವಜನ ಸಂಯುಕ್ತ ಮಂಡಳಿ (ರಿ ) ಸುಳ್ಯ ಹಾಗೂ ಫ್ರೆಂಡ್ಸ್ ಕ್ಲಬ್(ರಿ) ಪೈಲಾರು ಇದರ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮಕ್ಕೆ , ಯುವಜನ ಸಂಯುಕ್ತ ಮಂಡಳಿ ನಿರ್ದೇಶಕಿ ರಾಜೀವಿ ಗೋಳ್ಯಾಡಿ,ನಾರಾಯಣ ಕೊಡ್ತುಗುಳಿ, ಕೃಷ್ಣ ಪ್ರಸಾದ್ ಮಾಡಬಾಕಿಲು, ಮತ್ತು ಫ್ರೆಂಡ್ಸ್ ಕ್ಲಬ್ ಸದಸ್ಯರ ಉಪಸ್ಥಿತಿಯಲ್ಲಿ ಚಾಲನೆಯ ನೀಡಲಾಯಿತು.

ಯುವಜನ ಸಂಯುಕ್ತ ಮಂಡಳಿ (ರಿ ) ಸುಳ್ಯ ಹಾಗೂ ಯಶಸ್ವಿ ಫ್ರೆಂಡ್ಸ್ (ರಿ) ಕುಕ್ಕುಜಡ್ಕ ಇದರ ಜಂಟಿ ಆಶ್ರಯದಲ್ಲಿ ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ , ಕುಕ್ಕುಜಡ್ಕ ಅಂಗನವಾಡಿ ಪರಿಸರದಲ್ಲಿ ಯುವಕ ಮಂಡಲದ ಸದಸ್ಯರ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು.