ಪ್ರಪಂಚದಲ್ಲೇ ಅಬ್ಬರಿಸುತ್ತಿರುವ ಕಾಂತಾರ – ೧ ಸಿನೆಮಾದಲ್ಲಿ ಸುಳ್ಯದ ಕಲಾವಿದರೊಬ್ಬರು ನಟಿಸಿದ್ದು, ಟ್ರೇಲರ್ ಹಾಗು ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ.
ಲಕ್ಷಾಂತರ ಕಲಾವಿದರು ಆಡಿಶನ್ ಗೆ ಅರ್ಜಿ ಹಾಕಿದ್ದು. ಅದರಲ್ಲಿ ಕಳೆದ 2 ವರ್ಷಗಳಿಂದ ಗಡ್ಡ ಮೀಸೆ ಬಿಟ್ಟ್ಕೊಂಡು ತೊಡಗಿಸಿ ಕೊಂಡಿರುವ ಗಂಗಾಧರ್ ಅವ್ರು ಚಿತ್ರದ ಪಾತ್ರ ಒಂದರಲ್ಲಿ ನಟಿಸಿದ್ದಾರೆ.
ಮಂಗಳೂರಿನಲ್ಲಿ ಆಡಿಶನ್ ನಡೆದು, ನಂತರ ಕುಂದಾಪುರದಲ್ಲಿ ನಡೆದ ಆಡಿಶನ್ ನಲ್ಲಿ ಇವರು ಆಯ್ಕೆಯಾಗಿದ್ದರು.
ಚಿತ್ರದ ರಾಜಾ ಕುಲಶೇಖರ ( ಗುಲ್ಶನ್ ದೇವಯ್ಯ, ಬಾಲಿವುಡ್ ನಟ )ರಿಂದ ಕತ್ತು ಕತ್ತರಿಸಲ್ಪಡುವ ದ್ರಶ್ಯ , ಹಾಗೇ ಇತರ ಕೆಲವು ಮುಖ್ಯ ದೃಶ್ಯ ಗಳಲ್ಲಿ ಕೂಡ ಅವರ ಅಭಿನಯ ಇರುತ್ತದೆ.








ತನ್ನ 11 ನೇ ವಯಸ್ಸಿಗೆ ಶಂಕವಾದ್ಯ ಎಂಬ ನಾಟಕ ದಿಂದ ರಂಗ ಭೂಮಿ ಆರಂಭಿಸಿ ನಂತರ ಹತ್ತಾರು ಪ್ರಸಿದ್ದ ಹವ್ಯಾಸಿ ನಾಟಕ, ರಂಗ ಶಿಬಿರ, ಕಿರುಚಿತ್ರ, ಹಾಗೂ 4 ಚಲನ ಚಿತ್ರ ಗಳಲ್ಲಿ ಚಿಕ್ಕ ಪುಟ್ಟ ಪಾತ್ರಮಾಡಿ ಪ್ರಸ್ತುತ ಹೆಸರಾಂತ ಚಿತ್ರ ಸಂಸ್ಥೆ ಹೊಂಬಾಳೆ ‘ ಯವರ ಕಾಂತಾರ ಚಾಪ್ಟರ್ 1 ರಲ್ಲಿ , ತನ್ನ ಪ್ರತಿಭೆ ಮುಖಾಂತರ ಅವಕಾಶ ಪಡೆಯುವಲ್ಲಿ ಸಫಲರಾದರು.
ಪ್ರಸ್ತುತ ಗಂಗಾಧರ್ ಅವರಿಗೆ ಕನ್ನಡದ ಎರಡು ಸಿನಿಮಾಗಳ ಆಫರ್ ಬಂದಿದ್ದು, ಸುಳ್ಯದಲ್ಲೇ ಅರೆಭಾಷೆ ಸಿನಿಮಾದ ಮಾತುಕತೆ ಕೂಡ ನಡೆಯುತ್ತಿದೆ.
ಮೇಲ್ಚೆಂಬು ಕುಟುಂಬದ ಗಂಗಾಧರ್ ನೆಲ್ಲಿಕೋಡಿ ಅಲೆಟ್ಟಿ ಗ್ರಾಮದವರಾಗಿದ್ದು ಪ್ರಸ್ತುತ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವೃತ್ತಿಯಲ್ಲಿದ್ದಾರೆ.
ಧರ್ಮಪತ್ನಿ ರತ್ನ ಅವರು ಮೆಸ್ಕಾಂ ಉದ್ಯೋಗಿ ಹಾಗೂ ಮಗ ಸಾಗರ್ ಮಂಗಳೂರಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.










