ಶಾಸಕ ಎ. ಎಸ್ ಪೊನ್ನಣ್ಣರಿಂದ 5 ಲಕ್ಷ ಅನುದಾನದಲ್ಲಿನಿರ್ಮಾಣವಾಗುತ್ತಿರುವ ಸಂಪಾಜೆ -ಅರೆಕಲ್ಲು ರಸ್ತೆ

0

ಸಂಪಾಜೆ ವಲಯ ಕಾಂಗ್ರೆಸ್ ಸಮಿತಿಯಿಂದ ಕಾಮಗಾರಿ ಪರಿಶೀಲನೆ

ವಿರಾಜಪೇಟೆ ಜನಪ್ರಿಯ ಶಾಸಕರು ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಎ .ಎಸ್ ಪೊನ್ನಣ್ಣ ನವರ ಅನುದಾನದಲ್ಲಿ ಸಂಪಾಜೆ ಅರೆಕಲ್ಲು ರಸ್ತೆಗೆ 5 ಲಕ್ಷ ಮೊತ್ತದಲ್ಲಿ ಕಾಂಕ್ರಿಟೀಕರಣ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಸಂಪಾಜೆ ವಲಯ ಕಾಂಗ್ರೆಸ್ ಸಮಿತಿಯಿಂದ ಕಾಮಗಾರಿ ಪರಿಶೀಲನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಕನ್ಯಾನ, ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಪಿಎಲ್, ಗ್ಯಾರೆಂಟಿ ಸಮಿತಿ ಸದಸ್ಯರಾದ ರಾಜೇಶ್ವರಿ ಕೆಕೆ, ವಲಯ ಪ್ರಧಾನ ಕಾರ್ಯದರ್ಶಿಯಾದ ರಿತಿನ್ ಡೆಮ್ಮಲೆ, ವಲಯ ಉಪಾಧ್ಯಕ್ಷರಾದ ಮೋಹನ್ ಬಾಳಕಜೆ ಉಪಸ್ಥಿತರಿದ್ದರು.