ತೋಟಗಾರಿಕೆ ಇಲಾಖೆ ಸುಳ್ಯ ಮತ್ತು ಸುಳ್ಯ ರೈತ ಉತ್ಪಾದಕ ಕಂಪನಿ ನಿ. ಇದರ ಸಹಯೋಗದಲ್ಲಿ ರೈತರಿಗೆ ವಿಶೇಷವಾಗಿ 6 ತಿಂಗಳವರೆಗೆ ಕಾಫಿ ಗಿಡ ನಿರ್ವಹಣೆಯ ಮತ್ತು ಮಣ್ಣಿನಲ್ಲಿ ಪೋಷಕಾಂಶಗಳ ನಿರ್ವಹಣೆಯ ಕುರಿತು ತರಬೇತಿ ಕಾರ್ಯಕ್ರಮವನ್ನು ಸುಳ್ಯ ಎಪಿಎಂಸಿ ಸಭಾಭವನದಲ್ಲಿ ಜರಗಿತು.

ಪ್ರಗತಿಪರ ಕಾಫಿ ಬೆಳೆಗಾರರಾದ ಗೋವಿಂದ ಭಟ್ ಚೈಪೆ, ಗುತ್ತಿಗಾರು ರವರು ದೀಪ ಬೆಳಗಿಸಿ ಉದ್ಘಾಟಿಸಿ ತಮ್ಮ ಅನುಭವವನ್ನು ಹಂಚಿಕೊಂಡರು. ಸಂಪನ್ಮೂಲ ವ್ಯಕ್ತಿಗಳಾಗಿ ಕಾಫಿ ಸಂಶೋಧನಾ ಕೇಂದ್ರ ಚೆಟ್ಟಳ್ಳಿ ಇಲ್ಲಿಯ ವಿಜ್ಞಾನಿಯಾದ ಡಾ. ಎಸ್ ಎ ನದಾಫ್ ರವರು ಆಗಮಿಸಿ ಮುಂದಿನ ಆರು ತಿಂಗಳವರೆಗೆ ಕಾಫಿ ಗಿಡದ ನಿರ್ವಹಣೆಯ ಕುರಿತು ಅತ್ಯಂತ ಸುಲಲಿತವಾಗಿ ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಯಾದ ಡಾ. ಬಿ. ಕೆ ವಿಶು ಕುಮಾರ್ ಆಡಳಿತ ನಿರ್ದೇಶಕರು ಅವೆಂಚುರ ಆಗ್ರೋ ಪ್ರಾಡಕ್ಟ್ಸ್ ರವರು ಪೋಷಕಾಂಶಗಳ ಅವಶ್ಯಕತೆ ಮತ್ತು ನಿರ್ವಹಣೆಯ ಕುರಿತು ಮಾಹಿತಿ ನೀಡಿದರು. ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಪ್ರಮೋದ್ ಸಿಎಂ ರವರು ಪ್ರಾಸ್ತಾವಿಕ ಮಾತುಗಳೊಂದಿಗೆ ಇಲಾಖಾ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸಭಾಧ್ಯಕ್ಷತೆಯನ್ನು ಸುಳ್ಯ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರಾದ ವೀರಪ್ಪಗೌಡ ಕಣ್ಕಲ್ ರವರ ವಹಿಸಿದ್ದು ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಕೆಲಸ ಕಾರ್ಯಗಳ ಕುರಿತು ಮತ್ತು ಈ ಬಾರಿ ಕಾಫಿ ಗಿಡ ನೆಟ್ಟಂತಹ ಕೃಷಿಕರಿಗೆ ತರಬೇತಿ ಅವಶ್ಯಕತೆ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ಕಾಲಕಾಲಕ್ಕೆ ತರಬೇತಿ ನೀಡುವುದಾಗಿ ತಿಳಿಸಿದರು.
















ಸಹಾಯಕ ತೋಟಗಾರಿಕಾ ಅಧಿಕಾರಿಯಾದ ಅರಬಣ್ಣ ಪೂಜೇರಿ ಸ್ವಾಗತಿಸಿದರು ಮತ್ತು ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಹರೀಶ್ ಕೆ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ತರಬೇತಿಗೆ ನೋಂದಾಯಿಸಿದ ಸುಮಾರು 85 ಕಾಫಿ ಬೆಳೆಗಾರರು ತರಬೇತಿಯಲ್ಲಿ ಹಾಜರಿದ್ದು ತರಬೇತಿ ಪಡೆದುಕೊಂಡರು ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಸುಳ್ಯ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕರು, ಸಿಬ್ಬಂದಿ ವರ್ಗದವರು ಉಪಸ್ಥಿತಿ ಇದ್ದರು.

ಸುಳ್ಯ ತಾಲೂಕಿನ ಪ್ರಗತಿಪರ ಕಾಫಿ ಬೆಳೆಗಾರರಾದ ಶ್ರೀ ಗೋವಿಂದ ಭಟ್ ಚೈಪೆ ರವರಿಗೆ ಸನ್ಮಾನ
ಕಾರ್ಯಕ್ರಮವನ್ನು ಉದ್ಘಾಟಿಸಿದ ಗೋವಿಂದ ಭಟ್ ಚೈಪೆ ಕಳೆದ 20 ವರ್ಷದಿಂದ ಕಾಫಿ ಬೆಳೆಯುತ್ತಿದ್ದು ಪ್ರಸ್ತುತ ಸಾಲಿನಲ್ಲಿ ಸುಮಾರು 60 ಕ್ವಿಂಟಲ್ ಕಾಫಿ ಬೆಳೆಯುತ್ತಿರುವ ಸುಳ್ಯ ತಾಲೂಕಿನ ಅತೀ ಹೆಚ್ಚು ಕಾಫಿ ಬೆಳೆಯುವ ಬೆಳೆಗಾರರಾಗಿದ್ದಾರೆ ಈ ನೆಲೆಯಲ್ಲಿ ಸನ್ಮಾನ್ಯ ಗೋವಿಂದ ಭಟ್ ಚೈಪೆ ರವರನ್ನು ತೋಟಗಾರಿಕೆ ಇಲಾಖೆ ಮತ್ತು ಸುಳ್ಯ ರೈತ ಉತ್ಪಾದಕ ಕಂಪನಿಯ ವತಿಯಿಂದ ಸನ್ಮಾನಿಸಲಾಯಿತು.











