ತಾಲೂಕು ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ನಿರ್ಧಾರ















ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯರಕ್ಷಾ ಸಮಿತಿಯ ಸಾಮಾನ್ಯ ಸಭೆಯು ಸಮಿತಿಯ ಅಧ್ಯಕ್ಷರಾದ ಭಾಗೀರಥಿ ಮುರುಳ್ಯರವರ ಅಧ್ಯಕ್ಷತೆಯಲ್ಲಿ ಅ.೧೩ರಂದು ನಡೆಯಿತು.
ಆಡಳಿತ ವೈದ್ಯಾಧಿಕಾರಿಯವರು ಹಾಗೂ ಶಸ್ತ್ರಚಿಕಿತ್ಸೆ ತಜ್ಞರಾದ ಡಾ.ನವೀನ್ ಎನ್.ಎಸ್. ಸ್ವಾಗತಿಸಿದರು. ತಾಲೂಕು ಆಸ್ಪತ್ರೆ ಸುಳ್ಯ ಇಲ್ಲಿಗೆ ರಕ್ಷಾ ಸಮಿತಿಯ ಸದಸ್ಯರಾದ ಶ್ರೀ ಚಂದ್ರನ್ ಕೂಟೇಲು ಇವರ ಪ್ರಯತ್ನದ ಫಲವಾಗಿ ರೆಪ್ಕೋ ಹೋಮ್ ಫೈನಾನ್ಸ್ ವತಿಯಿಂದ ೬,೭೭,೨೬೦ ರೂಪಾಯಿ ಮೌಲ್ಯದ ಸಾಧನ ಸಲಕರಣೆ ಉಡುಗೊರೆ ಯಾಗಿ ನೀಡಿದ್ದು, ಅಬ್ದುಲ್ ಕುಂಞ ಇ. ಐ. ಸಂಪಾಜೆ ಇವರು ತಮ್ಮ ತಂದೆ ಇ.ಆರ್ ಇಬ್ರಾಹಿಂ ಇವರ ಜ್ಞಾಪಕಾರ್ಥವಾಗಿ ಡಯಾಲಿಸಿಸ್ ವಿಭಾಗಕ್ಕೆ ಒಂದು ವೀಲ್ ಚೇರ್ ಕೊಡುಗೆಯಾಗಿ ನೀಡಿರುತ್ತಾರೆ. ರಾಧಕೃಷ್ಣ ಪರಿವಾರಕಾನ ಇವರ ಬಾವನವರು ಒಂದು ಫ್ಯಾನ್ ಉಡುಗೊರೆಯಾಗಿ ನೀಡಿದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.
ಆಸ್ಪತ್ರೆಯ ಸ್ವಚ್ಛತೆ ಕಾಪಾಡಲು ಮತ್ತು ತಪ್ಪಿದವರಿಗೆ ದಂಡನೆ ಶುಲ್ಕ ವಿಧಿಸಲಾಗುತ್ತಿದೆ. ಹೆಚ್ಚುವರಿ ವಸತಿಗೃಹ ನಿರ್ಮಿಸಿ ಕೊಡು ಬೇಡಿಕೆ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ತಿಳಿಸಿದರು. ಐ.ಸಿ.ಯು. ವಿಭಾಗಕ್ಕೆ ಒಟಿ ಯಲ್ಲಿರುವ ಸಂಚಾರಿ ದೂರವಾಣಿ ಯನ್ನು ಬಳಸಲಾಗುವುದು ರಾತ್ರಿಯ ಸಮಯದಲ್ಲಿ ಒಟಿ ಸಂಚಾರಿ ದೂರವಾಣಿಯನ್ನು ಐ.ಸಿ.ಯು. ವಿಭಾಗಕ್ಕೆ ಇಡುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಅಗತ್ಯ ಔಷಧಗಳು ಮತ್ತು ಉಪಕರಣಗಳನ್ನು ಖರೀದಿ ಮಾಡಲು ಇ-ಟೆಂಡರ್ ಕರೆಯಲು ಸಭೆಯಲ್ಲಿ ಪ್ರಸ್ತಾಪಿಸಿ ಸಭೆಯ ಮಂಜೂರಾತಿ ಪಡೆಯಲಾಯಿತು.
ಆಸ್ಪತೆಯ ಶೌಚಾಲಯ ಮತ್ತು ಪಿಟ್ ಸ್ವಚ್ಛಗೊಳಿಸಲು ಸಭೆಯಲ್ಲಿ ಪ್ರಸ್ತಾಪಿಸಿ ಕ್ರಮಕೈಗೊಳ್ಳಲು ಸಭೆಯ ಮಂಜೂರಾತಿ ಪಡೆಯಲಾಯಿತು. ಹಾಗೂ ಐ.ಸಿ.ಯು.ನ ಶೌಚಾಲಯದ ರಿಪೇರಿ ನಡೆಸುವುದು. ಹೊಸ ಶವಾಗಾರ ಕೊಠಡಿಯ ಹೋಗುವ ದಾರಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಹಾಗೂ ಹಳೆಯ ಶವಗಾರ ಕೊಠಡಿಯನ್ನು ಕೆಡವಿ ಹೊಸ ಶವಗಾರಕ್ಕೆ ರಸ್ತೆ ನಿರ್ಮಿಸಲು ಸಭೆಯಲ್ಲಿ ಪ್ರಸ್ತಾಪಿಸಿ ಸಬೇಯ ಮಂಜೂರಾತಿ ಪಡೆದುಕೊಳ್ಳಲಾಯಿತು. ಈಗಾಗಲೇ ಪ್ರಸೂತಿ ತಜ್ಞರು. ಆಸ್ಪತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ತಿಂಗಳಿಗೆ ಸರಾಸರಿ ೬೦ ರಷ್ಟು ಹೆರಿಗೆ ಆಗುತ್ತಿದ್ದು ಹೆರಿಗೆ ವಾರ್ಡನ್ನು ವಿಸ್ತರಿಸಲು ಸಭೆಯಲ್ಲಿ ಪ್ರಸ್ತಾಪಿಸಿ ಅನುಮತಿ ಪಡೆಯಲಾಯಿತು. ಆಸ್ಪತ್ರೆಯ ವತಿಯಿಂದ ಎಲ್ಲಾ ಗ್ರೂಪ್ ಡಿ ನೌಕರರಿಗೆ ಏಕರೂಪದ ಸಮವಸ್ತ್ರ, ಒದಗಿಸಲು ರಕ್ಷಾ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಯಿತು. ಆಸ್ಪತ್ರೆಗೆ ಸೆಕ್ಯೂರಿಟಿ ಗಾಡ್ ನೇಮಕಕ್ಕೆ ಸರಕಾರದ ಗಮನಕ್ಕೆ ತರಲು ನಿರ್ಣಯ ಮಾಡಲಾಯಿತು.
ರೋಗಿಗಳ ಕೆಲವು ರಕ್ತಪರೀಕ್ಷೆಗೆ ಹೊರಗೆ ಕಳುಹಿಸಿದ ಬಗ್ಗೆ ಸದಸ್ಯರು ಪ್ರಸ್ತಾಪಿಸಿದಾಗ ಕೆಲವು ಪರೀಕ್ಷೆಗಳು ಆಸ್ಪತ್ರೆಯಲ್ಲಿ ಆಗದ ಕಾರಣ ಹೊರಗೆ ಕಳುಹಿಸಲಾಗುತ್ತಿದೆ ಎಮದು ಆಡಳಿತ ವೈದ್ಯಾಧಿಕಾರಿಗಳು ಹೇಳಿದರು. ಈ ಕುರಿತು ಸಮಾಲೋಚನೆ ನಡೆದು “ಆ ಸಂದರ್ಭ ರೋಗಿಗಳು ತೀರಾ ಬಡವರಾಗಿದ್ದರೆ ರಕ್ತ ಪರೀಕ್ಷೆಯ ಮೊತ್ತವನ್ನು ಆಸ್ಪತ್ರೆಯ ವತಿಯಿಂದ ಪಾವತಿಸಲು ಕ್ರಮಕೈಗೊಳ್ಳಲು ಸಭೆಯ ಅನುಮತಿ ಪಡೆಯಲಾಯಿತು. ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸೌಹಾರ್ದಯುತವಾಗಿ ನಡೆಯುವಂತೆ ಸದಸ್ಯರು ಸಾಮಾನ್ಯ ಸಭೆಯಲ್ಲಿ ಪ್ರಸಾಪಿಸಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಈ ಸಂದರ್ಭದಲ್ಲಿ ಅರೋಗ್ಯ ರಕ್ಷಾ ಸಮೀತಿ ಇದರ ಸದಸ್ಯರಾದ ಶಹೀದ್ ಪಾರೆ ಚಂದ್ರನ್ ಕೂಟೆಲ್ ಅಬ್ದುಲ್ ರಝಕ್ ಪ್ರಗತಿ ರಾಧಾಕೃಷ್ಣ ಪರಿವಾರ ಕಾನ ಶ್ರೀಮತಿ ವಿಜಯ ಜಯರಾಮ ತಾಲೂಕು ಆಸ್ಪತ್ರೆ ಆಡಳಿತ ಅಧಿಕಾರಿ ಆಡಿ ನವೀನ್ ಆಸ್ಪತ್ರೆ ಕಚೇರಿ ಅದಿಕ್ಷಕ ಶ್ರೀಮಂತ್ ಕುಮಾರ್ ಕಚೇರಿ ಪ್ರಥಮ ದರ್ಜೆ ಅಧಿಕಾರಿ ಕಾಂತಿ ಸುಸ್ರುಸಕಿ ಅಧೀಕ್ಷಕಿ ಹರಿಣಾಕ್ಷಿ ಮೊದಲಾದವರು ಉಪಸ್ಥಿತರಿದ್ದರು










