
ಸುಳ್ಯ ಕಸಬಾ ಗ್ರಾಮದ ಕಾಯರ್ತೋಡಿ ನಿವಾಸಿ ದೇವರಗುಂಡದ ನಿವೃತ್ತ ಪ್ರಾಂಶುಪಾಲರಾದ ಡಿ.ಎಸ್. ಕುಶಾಲಪ್ಪ ದೇವರಗುಂಡರವರು ಇತ್ತೀಚೆಗೆ ನಿಧನರಾಗಿದ್ದು, ಅವರ ಶ್ರದ್ದಾಂಜಲಿ ಸಭೆಯು ಸುಳ್ಯದ ಕೆವಿಜಿ ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ಅ. 19ರಂದು ನಡೆಯಿತು.
















ಪ್ರೊ.ಬಾಲಚಂದ್ರ ಗೌಡ, ಡಾ. ಚಿರಾಗ್, ವಿಕಾಸ ಪಟೇಲ್‌ರವರು ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸೇರಿದಂತೆ, ಮೃತರ ಪತ್ನಿ ಲೀಲಾ ಕುಶಾಲಪ್ಪ, ಪುತ್ರರಾದ ಸಂದೀಪ ಡಿ.ಕೆ., ಪ್ರದೀಪ್ ಡಿ.ಕೆ., ಡಾ. ಜಯದೀಪ್ ಕೆ., ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರು ಸಾರ್ವಜನಿಕರು ಉಪಸ್ಥಿತರಿದ್ದರು.




