ದುಗ್ಗಲಡ್ಕ : ನೇಣು ಬಿಗಿದು ಆತ್ಮಹತ್ಯೆ

0

ದುಗ್ಗಲಡ್ಕದಲ್ಲಿ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.

ದುಗ್ಗಲಡ್ಕ ನೀರಬಿದಿರೆ ನಿವಾಸಿ ಬಾಬು ನಾಯ್ಕ (55)ಎಂಬವರು ಆತ್ಮಹತ್ಯೆ ಮಾಡಿಕೊಂಡವರು. ದುಗ್ಗಲಡ್ಕ ಕೆಳಗಿನ ಪೇಟೆಯ ಬಳಿ ತೋಟ ಒಂದರೊಳಗೆ ಕೊಕ್ಕೋ ಮರಕ್ಕೆ ನೇಣು ಹಾಕಿ ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮರದ ಕೆಲಸ ಮಾಡುವ ವೃತ್ತಿ ಮಾಡಿಕೊಂಡಿದ್ದ ಅವರು ನಿನ್ನೆ ರಾತ್ರಿಯಿಂದ ಮನೆಯವರಿಗೆ ಸಂಪರ್ಕಕ್ಕೆ ಲಭ್ಯರಾಗಿರಲಿಲ್ಲವೆಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಬಾಬು ನಾಯ್ಕರವರು ಕೊಯಿಕುಳಿ ಮಿತ್ರ ಯುವಕ ಮಂಡಲದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಲಕ್ಷ್ಮೀ, ಪುತ್ರಿ ಮಂಜುಳ, ಸಹೋದರ, ಸಹೋದರಿಯರು ಹಾಗೂ ಬಂಧುಗಳನ್ನು ಅಗಲಿದ್ದಾರೆ.