ಪಂಜ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ – ವಿದ್ಯಾರ್ಥಿ ಕವಿಗೋಷ್ಠಿಗೆ ಕವನ ಆಹ್ವಾನ

0

ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ನ.16 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು, ಇದರ ಸಲುವಾಗಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ “ಕವಿಗೋಷ್ಠಿ” ಯನ್ನು ಹಮ್ಮಿಕೊಳ್ಳಲಾಗಿದೆ. ಪಂಜ ಹೋಬಳಿಯ ಗ್ರಾಮಗಳಾದ ಗುತ್ತಿಗಾರು, ನಾಲ್ಕೂರು, ದೇವಚಳ್ಳ, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು, ಕೂತ್ಕುಂಜ, ಮುರುಳ್ಯ, ಐವತೊಕ್ಲು, ಪಂಬೆತ್ತಾಡಿ ಹಾಗೂ ಪಕ್ಕದ ಸುಳ್ಯ ಹೋಬಳಿಯ ಗ್ರಾಮಗಳಾದ ಕಲ್ಮಡ್ಕ, ಕಳಂಜ, ಬಾಳಿಲ, ಅಮರ ಮುಡ್ನೂರು, ಅಮರ ಪಡ್ನೂರು, ನೆಲ್ಲೂರು ಕೆಮ್ರಾಜೆ ಮತ್ತು ಮಡಪ್ಪಾಡಿ ಗ್ರಾಮಗಳ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಹಾಗೂ ಭಾಷೆಗೆ ಸಂಬಂಧಿಸಿದ ಕವನಗಳ ಜೊತೆಗೆ ತಮ್ಮ ಸ್ವ-ಪರಿಚಯವನ್ನು ಇದೇ ಬರುವ ದಿನಾಂಕ ಅಕ್ಟೋಬರ್ 23ರ ಒಳಗಾಗಿ ಕಳುಹಿಸಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಅವಕಾಶ ಇರುತ್ತದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕವನಗಳನ್ನು ಕಳುಹಿಸುವವರು ಯೋಗೀಶ್ ಹೊಸೊಳಿಕೆ ಅವರ ಮೊಬೈಲ್ ಸಂಖ್ಯೆ 9449576632 ಗೆ ವಾಟ್ಸ್ ಆ್ಯಪ್ ಮೂಲಕ ಕಳುಹಿಸಬೇಕೆಂದು ಸಮ್ಮೇಳನದ ಸಂಘಟನಾ ಸಮಿತಿಯ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಹಾಗೂ ಪಂಜ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಾಬು ಗೌಡ ಅಚ್ರಪ್ಪಾಡಿ ತಿಳಿಸಿದ್ದಾರೆ.