ಅ.29ರಿಂದ ನಾಲ್ಕು ದಿನ ಸುಳ್ಯ ಪೋಸ್ಟ್ ಆಫೀಸಿನಲ್ಲಿ ಆಧಾರ್ ಸೇವೆ

0

ಸುಳ್ಯ ಅಂಚೆ ಇಲಾಖೆಯಲ್ಲಿ ಅ.29, 30, 31 ಹಾಗೂ ನ.1ರಂದು ನಾಲ್ಕು ದಿನಗಳ‌ ಕಾಲ ಆಧಾರ್ ಸೇವೆ ಸಿಗಲಿದೆ.‌ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಅಂಚೆ ಇಲಾಖೆ ಅಧಿಕಾರಿಗಳು‌ ಮಾಹಿತಿ ನೀಡಿದ್ದಾರೆ.

ಸುಳ್ಯದ ಅಂಚೆ ಇಲಾಖೆಯಲ್ಲಿ ಹಿಂದೆ ಆಧಾರ್ ಸೇವೆ ನಿರಂತರವಾಗಿ ಸಿಗುತಿತ್ತು. ಇದರ ಜತೆಗೆ ಸುಳ್ಯದ ತಾಲೂಕು ಪಂಚಾಯತ್, ಬ್ಯಾಂಕ್ ಆಫ್‌ ಬರೋಡಾದಲ್ಲಿಯೂ ಸೇವೆ ಸಿಗುತ್ತಿತ್ತು. ‌ನಂತರ ತಾಂತ್ರಿಕ ‌ಕಾರಣಗಳಿಂದಾಗಿ ಆಧಾರ್ ಸೇವೆ ಸ್ಥಗಿತಗೊಂಡಿತು.

ಆಧಾರ್ ಸೇವೆ ಸ್ಥಗಿತವಾಗಿದ್ದರಿಂದ ಶಾಲಾ -‌ಕಾಲೇಜು‌ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ‌ ತುಂಬಾ ಸಮಸ್ಯೆಯಾಗುತಿತ್ತು.‌ ಆಧಾರ್ ಸೇವೆಯಾಗಿ ಬೆಳ್ಳಾರೆ, ಪುತ್ತೂರು ತಾಲೂಕಿಗೆ‌ ಹೋಗಬೇಕಾದ ಸ್ಥಿತಿ‌ ನಿರ್ಮಾಣಗೊಂಡಿತ್ತು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯರಿಗೂ ಸಾರ್ವಜನಿಕರು ಮನವಿ ಸಲ್ಕಿಸಿದ್ದರು. ಇವರು‌ ಜಿಲ್ಲಾಧಿಕಾರಿ ಗಳ ಮೂಲಕ ಸೂಕ್ತ ಸೌಲಭ್ಯಕ್ಕೆ ಸೂಚಿಸಿದ್ದರು.

ಸುಳ್ಯ‌ನಗರ ಪಂಚಾಯತ್ ಸದಸ್ಯ ರಿಯಾಕ್‌ ಕಟ್ಟೆಕಾರ್ ರವರು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ರ ಮೂಲಕ ಸರಕಾರಕ್ಕೆ‌ ಮನವಿ ಮಾಡಿಕೊಂಡಿದ್ದರು.

ಇವರೆಲ್ಲರ ಪ್ರಯತ್ನದ ಫಲವಾಗಿ ಮತ್ತೆ ಸುಳ್ಯ ಅಂಚೆ ಇಲಾಖೆಯಲ್ಲಿ ಆಧಾರ್ ಸೇವೆ ಆರಂಭವಾಯಿತು.

ಆಪರೇಟರ್ ಇಲ್ಲದೆ ಸಮಸ್ಯೆ

ಸುಳ್ಯದಲ್ಲಿ ಆಧಾರ್ ಸೇವೆ ಆರಂಭವಾಯಿತಾದರೂ ಕೆಲವು ದಿನಗಳ ಬಳಿಕ ಆಪರೇಟರ್ ಇಲ್ಲದೆ ಸೇವೆ ಸ್ಥಗಿತಗೊಂಡಿತು. ಪರಿಣಾಮ ಮತ್ತೆ ಸಮಸ್ಯೆಗಳು ಎದುರಾದವು.

ನ.ಪಂ. ಸದಸ್ಯ ರಿಯಾಜ್‌ ಕಟ್ಟೆಕಾರ್ ರವರು ನಿರಂತರವಾಗಿ ಅಧಿಕಾರಿಗಳ ಸಂಪರ್ಕದಲ್ಲಿದ್ದು ಆಧಾರ್ ಸೇವೆಗೆ ಒತ್ತಾಯ‌ ಮಾಡುತಿದ್ದರು.

ಇದೀಗ ಅ.29, 30, 31 ಹಾಗೂ‌ ನ.
1ರಂದು ಆಧಾರ್ ಸೇವೆ ಸುಳ್ಯ ಅಂಚೆ ಇಲಾಖೆಯಲ್ಲಿ ದೊರೆಯಲಿದೆ.‌ ಇಲ್ಲಿ‌ ಸೇವೆ ‌ನೀಡಬೇಕಾಗಿದ್ದ ಸಿಬ್ಬಂದಿಗೆ‌ ಇಲಾಖಾ‌ ಪರೀಕ್ಷೆ ‌ನಡೆಯುತ್ತಿದೆ. ಇದರಿಂದಾಗಿ ಪ್ರತೀ ದಿನ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ.‌ ಅ.29ರಿಂದ ಟೋಕನ್ ಪ್ರಕಾರ‌ ಸೇವೆ ನೀಡಲಾಗುತ್ತದೆ. ಅ.14ರಿಂದ ಆಪರೇಟರ್ ಪರೀಕ್ಷೆ ಮುಗಿಸಿ ಬರುವುದರಿಂದ ಪೂರ್ಣ ಪ್ರಮಾಣದಲ್ಲಿ ಸೇವೆ ಆರಂಭಕ್ಕೆ ಇಲಾಖೆ ವತಿಯಿಂದ ಸಿದ್ಧತೆ‌ ನಡೆಸಲಾಗುತ್ತಿರುವುದಾಗಿ ತಿಳಿದುಬಂದಿದೆ.