ರಾಜ್ಯ ಮಟ್ಟದ ವೈಟ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ಪಂದ್ಯಾಕೂಟದ ಆಮಂತ್ರಣ ಬಿಡುಗಡೆ

0

ಸುಳ್ಯದಲ್ಲಿ ಪ್ರಥಮ ಬಾರಿಗೆ ನಡೆಯಲಿರುವ ವೈಟ್ ಲಿಫ್ಟಿಂಗ್ ಪಂದ್ಯಾಟಕ್ಕೆ ಭರದ ಸಿದ್ಧತೆ

ಸುಳ್ಯ ಸ್ಪೋರ್ಟ್ಸ್ & ಆರ್ಟ್ಸ್ ಅಸೋಸಿಯೇಶನ್, ಸಂಘಟನಾ ಸಮಿತಿ ಕರ್ನಾಟಕ ರಾಜ್ಯ ವೈಟ್ ಲಿಪ್ಟಿಂಗ್ ಚಾಂಪಿಯನ್ ಶಿಪ್,ಸರಕಾರಿ ಜೂನಿಯರ್ ಕಾಲೇಜು, ರಾಜ್ಯ ವೈಟ್ ಲಿಫ್ಟರ್ಸ್ ಸಂಸ್ಥೆ ಬೆಂಗಳೂರು ಇದರ ಮಾನ್ಯತೆಯೊಂದಿಗೆ
ನ. 7,8 ಮತ್ತು 9 ರಂದು ಯುವಜನ ಸಂಯುಕ್ತ ಮಂಡಳಿಯ ಮುಂಭಾಗದ ಮೈದಾನ ಸುಳ್ಯದಲ್ಲಿ
ಪ್ರ ಪ್ರಥಮ ಬಾರಿಗೆ ರಾಜ್ಯ ಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಪಂದ್ಯಾಕೂಟವು ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಅ. 27 ರಂದು ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ನಡೆಯಿತು.

ಅಸೋಸಿಯೇಷನ್ ಆಡಳಿತ ಮಂಡಳಿಯ ಸದಸ್ಯರಾದ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ರವರು ಅಧ್ಯಕ್ಷತೆ ವಹಿಸಿದ್ದರು.
ಸಮಿತಿ ಗೌರವಾಧ್ಯಕ್ಷ ಉದ್ಯಮಿ ಕೆ. ಕೃಷ್ಣ ಕಾಮತ್ ರವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿ ದಿರೆ,ಗೌರವಸಲಹೆಗಾರರಾದ ಎನ್. ಎ. ರಾಮಚಂದ್ರ, ಮುಖ್ಯ ಸಂಚಾಲಕ ನಾರಾಯಣ ಕೇಕಡ್ಕ, ನ್ಯಾಯವಾದಿ ಜಯಪ್ರಕಾಶ್ ರೈ, ಜೂನಿಯರ್ ಕಾಲೇಜ್ ಪ್ರಾಂಶುಪಾಲರಾದ ಮೋಹನ್ ಬೊಮ್ಮೆಟ್ಟಿ, ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ ರವರು ಉಪಸ್ಥಿತರಿದ್ದರು.
ಈಗಾಗಲೇ ಪಂದ್ಯಾ ಕೂಟದ ಆಯೋಜನೆಗೆ ಭರದ ಸಿದ್ಧತೆ ನಡೆಯುತ್ತಿದ್ದು ಇದರ ಕುರಿತು
ಅಸೋಸಿಯೇಷನ್ ಆಡಳಿತ ನಿರ್ದೇಶಕರು, ಸಮಿತಿಯ
ಕೋಶಾಧಿಕಾರಿ ಅಶೋಕ ಪ್ರಭು ರವರು ಪಂದ್ಯಾಕೂಟದ ಪೂರ್ವ ತಯಾರಿಯ ಸಂಪೂರ್ಣ ವಿವರ ನೀಡಿದರು.
ಅಸೋಸಿಯೇಷನ್ ಕಾರ್ಯದರ್ಶಿ ಎ. ರಮೇಶ್ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು.
ಸಮಿತಿ ಪ್ರ. ಕಾರ್ಯದರ್ಶಿ ಸುನಿಲ್ ಕೇರ್ಪಳ ವಂದಿಸಿದರು.ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಸೋಸಿಯೇಷನ್ ಸದಸ್ಯರಾದ ದೊಡ್ಡಣ್ಣ ಬರೆಮೆಲು, ರಾಧಾಕೃಷ್ಣ
ಮಾಣಿಬೆಟ್ಟು, ಉಪ ಸಮಿತಿ ಸಂಚಾಲಕರಾದ ಗೋಕುಲ್ ದಾಸ್, ಬೂಡು ರಾಧಾಕೃಷ್ಣ ರೈ, ಹರೀಶ್ ಕಂಜಿಪಿಲಿ, ಸಂತೋಷ್ ಕುತ್ತಮೊಟ್ಟೆ, ಬೆಳ್ಯಪ್ಪ ಗೌಡ, ಧೀರ ಕ್ರಾಸ್ತ,
ರವಿಚಂದ್ರಕೊಡಿಯಾಲಬೈಲು, ಮಲ್ಲೇಶ್ ಬೆಟ್ಟಂಪಾಡಿ, ಚಿದಾನಂದ ಕುದ್ಪಾಜೆ, ರಂಜಿತ್ ನೆಡ್ಚಿಲು, ಸತೀಶ್ ಯಂ. ಕೆ, ಶಿವನಾಥ ರಾವ್, ಸುನಂದಾ ಟೀಚರ್, ನಮಿತಾ ರಾವ್, ರಾಮಚಂದ್ರ ಮೇನಾಲ, ಪ್ರದೀಪ್ ಬೂಡು, ಸೀತಾರಾಮ ಎಂ. ಡಿ, ಹಾಗೂ ಎಸ್ ಎಎಎಸ್ ಸದಸ್ಯರು, ಮತ್ತಿತರರು ಭಾಗವಹಿಸಿದರು.