ಅಲ್ಪಸಂಖ್ಯಾತರ ಸೊಸೈಟಿ : ಕಣದಿಂದ ಹಿಂದೆ ಸರಿದ ಶರೀಫ್ ಕಂಠಿ

0

ಸುಳ್ಯ ತಾಲೂಕು ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದ ನ.ಪಂ.ಸದಸ್ಯ ಶರೀಫ್ ಕಂಠಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆಂದು ತಿಳಿದುಬಂದಿದೆ.


” ಅಲ್ಪಸಂಖ್ಯಾತರ ಸೊಸೈಟಿ ಚುನಾವಣೆಗೆ ಸ್ಪರ್ಧಿಸಲು ನಾನು ನಾಮಪತ್ರ ಸಲ್ಲಿಸಿದ್ದೆ. ಆದರೆ ನಾನು ಸ್ಪರ್ಧೆ ಮಾಡದಿರಲು ನಿರ್ಧರಿಸಿದ್ದೇನೆ. ನಾಮಪತ್ರ ಹಿಂದೆ ಪಡೆಯಲು ಕೊನೆಯ ದಿನದಂದು ನಾನು ನಗರ ಪಂಚಾಯತ್ ಮೀಟಿಂಗಲ್ಲಿ ಇದ್ದುದರಿಂದ ನಿಗದಿತ ಸಮಯದೊಳಗೆ ಹಿಂದಕ್ಕೆ ಪಡೆಯಲು ಸಾಧ್ಯವಾಗಿಲ್ಲ. ಅಲ್ಲದೆ ಅಗತ್ಯವಿರುವ 9 ಸಾಮಾನ್ಯ ನಿರ್ದೇಶಕ ಸ್ಥಾನಗಳಿಗೆ 10 ಮಂದಿ ಕಣದಲ್ಲಿರುವುದರಿಂದ ಪೈಪೋಟಿ ಬೇಡವೆಂಬ ನೆಲೆಯಲ್ಲಿ ಕಣದಿಂದ ಹಿಂದೆ ಸರಿಯುತ್ತೇನೆ ” ಎಂದು ಶರೀಫ್ ಕಂಠಿ ತಿಳಿಸಿದ್ದಾರೆ.