ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ,ಶಿವಾಜಿ ಯುವಕ ಮಂಡಲ (ರಿ.) ಕೂತ್ಕುಂಜ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮುಕ್ತ ಅಂಡರ್ ಆರ್ಮ್ 30 ತಂಡಗಳ, 30 ಗಜಗಳ, 7 ಜನರ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಶಿವಾಜಿ ಟ್ರೋಫಿ 2025 ಅ. 19 ರಂದು. ಕೂತ್ಕುಂಜ “ಅಟಲ್ ಜೀ” ಕ್ರೀಡಾಂಗಣದಲ್ಲಿ ನಡೆಯಿತು.
ಶಿವಾಜಿ ಯುವಕ ಮಂಡಲದ ಪೂರ್ವಾಧ್ಯಕ್ಷ ರಾಧಾಕೃಷ್ಣ ಸಿ.ಟಿ. ಉದ್ಘಾಟಿಸಿದರು.
















ಶಿವಾಜಿ ಯುವಕ ಮಂಡಲದ ಅಧ್ಯಕ್ಷ ಆದರ್ಶ ಚಿದ್ಗಲ್ಲು ಸಭಾಧ್ಯಕ್ಷತೆ ವಹಿಸಿದ್ದರು.
ಯುವಜನ ಸಂಯುಕ್ತ ಮಂಡಳಿ ಕೋಶಾಧಿಕಾರಿ ಲೋಹಿತ್ ಬಾಳಿಕಳ ಹಾಗೂ ಕ್ರೀಡಾ ಕಾರ್ಯದರ್ಶಿ ಜನಾರ್ಧನ ನಾಗತೀರ್ಥ, ಯುವಕ ಮಂಡಲದ ಪೂರ್ವಾಧ್ಯಕ್ಷ ಜಯರಾಮ ಕಲ್ಲಾಜೆ,ಕಾರ್ಯದರ್ಶಿ ಲಿಖಿತ್ ಅಜ್ಜಿಹಿತ್ಲು , ಕಾರ್ಯಕ್ರಮ ನಿರ್ದೇಶಕ ಜೀವನ್ ಬಿಳಿಮಲೆ, ದೇವಿಪ್ರಸಾದ್ ಕುಳ್ಳಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದೇವಿಪ್ರಸಾದ್ ಕುಳ್ಳಾಜೆ ಸ್ವಾಗತಿಸಿದರು, ಷಣ್ಮುಖ ಹೊಸೋಕ್ಲು ನಿರೂಪಿಸಿದರು,ಲಿಖಿತ್ ಅಜ್ಜಿಹಿತ್ಲು ವಂದಿಸಿದರು.
ಫಲಿತಾಂಶ,: ಫೋರ್ ಜಿ ದುಗಲಡ್ಕ ಪ್ರಥಮ, ಹಂಟರ್ಸ್ ಬಳ್ಳಕ್ಕ ದ್ವಿತೀಯ,ಸಚಿನ್ ಕ್ರಿಕೆಟ್ರ್ಸ್ ಹರಿಹರ ತೃತೀಯ ,ಶಿವಂಮೃತ ಪುತ್ತೂರು ಚತುರ್ಥ ಸ್ಥಾನ ಪಡೆದಿದ್ದಾರೆ.










