ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಅ. 19ರಂದು ಜರುಗಿದ 22ನೇ ಜಿಲ್ಲಾ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಸುಳ್ಯ ತಾಲೂಕಿನ ಬಾಳಿಲದ ಮೂವರು ಕ್ರೀಡಾಪಟುಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.















70ರ ವಯೋಮಾನದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಸುಭಾಶ್ಚಂದ್ರ ರೈ ತೋಟ ಚಕ್ರಎಸೆತ ಮತ್ತು ಈಟಿ ಎಸೆತದಲ್ಲಿ ದ್ವಿತೀಯ ಸ್ಥಾನ, 50ರ ವಯೋಮಾನದಲ್ಲಿ ಬಾಲಕೃಷ್ಣ ರೈ ಪಾದೆಕಲ್ಲು ಚಕ್ರ ಎಸೆತ ಮತ್ತು ಈಟಿ ಎಸೆತದಲ್ಲಿ ಪ್ರಥಮ ಸ್ಥಾನ, 800 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಮತ್ತು 45ರ ವಯೋಮಾನದಲ್ಲಿ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಅಧ್ಯಾಪಕರಾದ ಲೋಕೇಶ್ ಬೆಳ್ಳಿಗೆ ಚಕ್ರ ಎಸೆತದಲ್ಲಿ ಪ್ರಥಮ, 100 ಮತ್ತು 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು 2025 ಡಿಸೆಂಬರ್ 20 ಮತ್ತು 21ರಂದು ಕೋಲಾರದಲ್ಲಿ ಜರಗುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುತ್ತಾರೆ.










