ಕರಿಕ್ಕಳದಲ್ಲಿ ಕಬ್ಬು ಜ್ಯೂಸ್ ಮೆಷಿನ್ ಅಂಗಡಿಗೆ ಅ.28 ರಂದು ಹಾನಿಯಾಗಿದ್ದು ಇದು ಕಳ್ಳತನ ಯತ್ನವಾಗಿರುವ ಸಂಶಯ ವ್ಯಕ್ತವಾಗಿದೆ.















ಕರಿಕ್ಕಳದಲ್ಲಿ ಕುಸುಮಾಧರ ಎಂಬವರ ಗೂಡು ಸಮೇತ ಕಬ್ಬು ಜ್ಯೂಸ್ ಮೆಷಿನ್ ನೆಲಕ್ಕೆ ಬಿದ್ದಿರುವುದು ಅ.29 ರಂದು ಅವರ ಗಮನಕ್ಕೆ ಬಂತು. ಮೊದಲು ಇದು ಕಿಡಿಗೇಡಿಗಳ ಕೃತ್ಯ ಎಂದು ಸಂಶಯಿಸಲಾಗಿತ್ತು. ಆದರೆ ಅ.28 ರಂದು ರಾತ್ರಿ ನಿಂತಿಕಲ್ಲು ಸಮೀಪವೂ ಕಬ್ಬು ಜ್ಯೂಸ್ ಮೆಷಿನ್ ಇದ್ದ ಗೂಡಿನ ಚಕ್ರಕ್ಕೆ ಅಡ್ಡವಿಟ್ಟಿದ್ದ ಕಲ್ಲುಗಳನ್ನು ತೆಗೆದಿರುವುದು ಕಂಡು ಬಂದಿದ್ದು ಎರಡು ಕಡೆಯೂ ಕಬ್ಬು ಜ್ಯೂಸ್ ಮೆಷಿನ್ ಕಳ್ಳತನಕ್ಕೆ ವಿಫಲ ಯತ್ನ ಆಗಿರುವುದಾಗಿ ಸಂಶಯಿಸಲಾಗಿದೆ.










