ಬಿದ್ದುಸಿಕ್ಕಿದ ಮೊಬೈಲ್‌ನ್ನು ಮಾರಾಟ ಮಾಡಲು ಹೋದಾಗ ಸಿಕ್ಕಿ ಬಿದ್ದ ಘಟನೆ ವರದಿಯಾಗಿದೆ.









ಜಟ್ಟಿಪಳ್ಳ-ಸೂರ್ತಿಲ ಪಡ್ಪು ರಸ್ತೆಯ ಮಧ್ಯೆ ಕಾಯರ್ತೋಡಿಯ ಅನಿಲ್‌ಕುಮಾರ್ ಎಂಬವರ ಮೊಬೈಲ್ ಹಾಗೂ ಅದರಲ್ಲಿದ್ದ ನಗದ ಬಿದ್ದು ಹೋಗಿತ್ತು. ಕೂಡಲೇ ಇದನ್ನು ಪೊಲೀಸ್ ದೂರು ನೀಡಿದ್ದು, ಎಲ್ಲಾ ಮೊಬೈಲ್ ಅಂಗಡಿಗಳಿಗೆ ತಿಳಿಸಲಾಯಿತು. ಸುದ್ದಿ ವೆಬ್‌ಸೈಟ್‌ನಲ್ಲಿ ನ್ಯೂಸ್ ಕೂಡಾ ಪ್ರಕಟವಾಯಿತು. ಸಂಜೆಯ ವೇಳೆಗೆ ಉಬರಡ್ಕ ಗಂಗರಾಜ್ ಎಂಬಾತ ಅದೇ ಮೊಬೈಲನ್ನು ಗಾಂಧಿನಗರದ ಮೊಬೈಲ್ ಅಂಗಡಿಗೆ ಮೊಬೈಲ್‌ನ ಲಾಕ್ ತೆಗೆಸಲು ಬಂದಿದ್ದ ವೇಳೆ ಸಿಕ್ಕಿಬಿದ್ದ ಎಂದು ತಿಳಿದು ಬಂದಿದೆ. ಅದರಲ್ಲಿದ್ದ ನಗದನ್ನು ಆತ ಖರ್ಚು ಮಾಡಿದ್ದ. ಆತನನ್ನು ಸುಳ್ಯ ಪೊಲೀಸ್ ಠಾಣೆಗೆ ಕರೆತಂದಾಗ ಆತ ಮೊಬೈಲ್ ಲಾಕ್ ತೆಗೆಸಲು ಕೊಟ್ಟ ಅಂಗಡಿ ಬಂದ್ ಆದ ಕಾರಣ ನಾಳೆ ಗಂಗರಾಜ್‌ನನ್ನು ಪೊಲೀಸ್ ಠಾಣೆಗೆ ಬರಲು ತಿಳಿಸಿದ್ದಾರೆಂದು ತಿಳಿದುಬಂದಿದೆ.










