ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಕಲಾವಿದ ಸುಂದರ ರೈ ಮಂದಾರ ಅವರನ್ನು ಯಕ್ಷ ತೆಲಿಕೆ ತಂಡದಿಂದ ಸನ್ಮಾನಿಸಲಾಯಿತು.









ನ. 2 ರಂದು ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ ವಠಾರದಲ್ಲಿ ನಡೆದ ಸಾರ್ವಜನಿಕ ಗೋಪೂಜಾ ಕಾರ್ಯಕ್ರಮದ ವೇಳೆ ಸಾಂಸ್ಕೃತಿಕ ಪ್ರದರ್ಶನ ನೀಡಲು ಆಗಮಿಸಿದ್ದ ಸಂದರ್ಭ ತಂಡದ ಯಕ್ಷ ತೆಲಿಕೆ ತಂಡದ ಮುಖ್ಯಸ್ಥ, ಕಲಾವಿದ ದಿನೇಶ್ ಕೋಡಪದವು, ಭಾಗವತ ಧೀರಜ್ ರೈ ಸಂಪಾಜೆ, ಕಲಾವಿದರಾದ ಪ್ರಜ್ವಲ್ ಗುರುವಾಯನಕೆರೆ, ದಿನೇಶ್ ರೈ ಕಡಬ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.








