ಮುಳ್ಯದಲ್ಲಿ‌ ಇಂಟರ್ ಲಾಕ್ ತುಂಬಿದ್ದ ಲಾರಿ ಪಲ್ಟಿ

0

ಓರ್ವರಿಗೆ ಗಾಯ ಆಸ್ಪತ್ರೆಗೆ ದಾಖಲು

ಅಜ್ಜಾವರ ಗ್ರಾಮದ ಮುಳ್ಯದಲ್ಲಿ ಹೊಸ ಮನೆಯ ಅಂಗಳಕ್ಕೆ ಇಂಟರ್ ಕಾಲ್ ಅಳವಡಿಸಲು ಲಾರಿಯಲ್ಲಿ ಇಂಟರ್ ಲಾಕ್ ತುಂಬಿ ಕೊಂಡು ಹೋಗುತ್ತಿದ್ದಾಗ ಆ ಲಾರಿ ಪಲ್ಟಿಯಾಗಿದೆ.

ರಸ್ತೆ ಮಾಡಲು ಬದಿಗೆ ತಡೆಗೋಡೆ ಕಟ್ಟಿ ಮಣ್ಣು ಹಾಕಿದ್ದು, ಕಂಪೌಂಡ್ ಸಮೇತ ಜರಿದು ಲಾರಿ ಪಲ್ಟಿ ಆಗಿದೆ. ಲಾರಿ ಜಖಂಗೊಂಡಿದ್ದು, ಲಾರಿಯಲ್ಲಿದ್ದ ಒಬ್ಬರಿಗೆ ಗಾಯವಾಗಿದ್ದು ಅವರನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆತರಲಾಗಿದೆ ಎಂದು ತಿಳಿದುಬಂದಿದೆ.