














ಮುಪ್ಪೇರ್ಯ ಗ್ರಾಮದ ಮರುವದಗುಂಡಿ ದಿ.ವೆಂಕಪ್ಪ ಮತ್ತು ದಿ. ವೀರಮ್ಮ ದಂಪತಿಗಳ ಪುತ್ರ ಸುಂದರ ರವರು ಅಲ್ಪ ಕಾಲದ ಅಸೌಖ್ಯದಿಂದ ನ.5 ರಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 41 ವರುಷ ವಯಸ್ಸಾಗಿತ್ತು. ಮೃತರು ಅವಿವಾಹಿತರಾಗಿದ್ದು , ಸಹೋದರ ಹರಿಪ್ರಸಾದ್ , ಸಹೋದರಿಯರಾದ ಶ್ರೀಮತಿ ಗಿರಿಜಾ, ಶ್ರೀಮತಿ ಸುಶೀಲಾ, ಶ್ರೀಮತಿ ಶಶಿಕಲಾ, ಶ್ರೀಮತಿ ಗುಲಾಬಿ, ಬಾವಂದಿರು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.










