ಸುಳ್ಯದಲ್ಲಿ ಅದ್ವೈತ್ ಜೆಸಿಬಿ ಗ್ರಾಹಕರ ಸಭೆ

0

ಪ್ರತಿಷ್ಠಿತ ಜೆಸಿಬಿ ಸಂಸ್ಥೆ ಅದ್ವೈತ್ ಜೆಸಿಬಿಯವರ ಗ್ರಾಹಕರ ಸಭೆಯು ಸುಳ್ಯದ ಆರಂಬೂರಿನ ರಸಪಾಕ ಹೋಟೆಲ್ ಸಭಾಂಗಣದಲ್ಲಿ ನ. 14ರಂದು ಸಂಜೆ ನಡೆಯಿತು.

ಮಾರ್ಕೆಟಿಂಗ್ ಮ್ಯಾನೇಜರ್ ರೋಷನ್, ಆಡಳಿತ ವ್ಯವಸ್ಥಾಪಕ ಮಧು ಕಾಳಮ್ಮನೆ, ಸರ್ವಿಸ್ ಡೀಲರ್ ಟ್ರೈನರ್ ಮ್ಯಾನೇಜರ್ ಕುಶನ್ ಮಾತನಾಡಿದರು. ಸೇಲ್ಸ್ ಇಂಜಿನಿಯರ್ ಅಭಿಷೇಕ್ ಮತ್ತು ಮಿತೇಶ್ ಉಪಸ್ಥಿತರಿದ್ದರು.

ಸುಳ್ಯ ಸುತ್ತಮುತ್ತಲಿನ ಸುಮಾರು 50 ಜೆಸಿಬಿ ಗ್ರಾಹಕರು ಮತ್ತು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.