ಕುಕ್ಕೆ ದೇವಾಲಯದ ವ್ಯವಸ್ಥಾಪನ ಸಮಿತಿಯ ಸದಸ್ಯೆ ಪ್ರವೀಣ್ ಪ್ರಶಾಂತ್ ರೈ ಮರುವಂಜರಿಗೆ ಗೌರವ

ಮುರ್ಪ್ಪೆರ್ಯ ಗ್ರಾಮದ ಮರುವಂಜ ಮುಗುಪ್ಪು ಕೊರಗಜ್ಜನ ಸಾನಿಧ್ಯದಲ್ಲಿ ವಿಶೇಷವಾಗಿ ಸಂಕ್ರಮಣ ಪೂಜೆ ಹಾಗೂ ಅಗೇಲು ಸೇವೆ ನಡೆಯಿತು.









ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಪ್ರವೀಣ್ ಪ್ರಶಾಂತ್ ರೈ ಮರುವಂಜ ಇವರಿಗೆ ಶಾಲು ಹೊದೆಸಿ ಗೌರವಿಸಲಾಯಿತು.
ಹಾಗೆಯೇ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಮಹೋತ್ಸವದ ಆಮಂತ್ರಣ, ಫಲವಸ್ತುಗಳನ್ನು ಇಟ್ಟು ಕೊರಗಜ್ಜನ ಸಾನಿಧ್ಯದಲ್ಲಿ ಪ್ರಾರ್ಥನೆ ಮಾಡಿ ಸೇರಿರುವಂತಹ ಎಲ್ಲಾ ಭಕ್ತಾಭಿಮಾನಿಗಳಿಗೆ ಆಮಂತ್ರಣ ನೀಡಲಾಯಿತು. ಈ ವೇಳೆ ಪರಿಚಾರಕರು, ಊರಿನ ಹಿರಿಯರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.










