ವಿವಿಧ ಕ್ಷೇತ್ರದ ಸಾಧಕರಿಗೆ, ಸಂಘಟನೆಗಳಿಗೆ ಸನ್ಮಾನ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.16 ರಂದು ಪಂಜ ಹೋಬಳಿ ಸಾಹಿತ್ಯ ಸಮ್ಮೇಳನ ನಡೆದಿದ್ದು ಸಂಜೆ ಸಮಾರೋಪ ಸಮಾರಂಭ ಮತ್ತು ಸಿರಿಗನ್ನಡ ಸನ್ಮಾನ ಕಾರ್ಯಕ್ರಮ ನಡೆದಿದ್ದು ವಿವಿಧ ಕ್ಷೇತ್ರದ ಸಾಧಕರಿಗೆ, ಸಂಘಟನೆಗಳಿಗೆ ಸನ್ಮಾನ ನಡೆಸಲಾಯಿತು.

ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ವಹಿಸಿದ್ದರು. ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯ ಗುರುಗಳಾದ ರಾಮಕೃಷ್ಣ ಭಟ್ ಚೊಕ್ಕಾಡಿ ಸಮಾರೋಪ ಭಾಷಣ ಮಾಡಿದರು.

ಸಾಮಾಜಿಕ ಮುಖಂಡರಾದ ಚಂದ್ರಶೇಖರ ತಳೂರು ಸಾಧಕರನ್ನು ಸನ್ಮಾನಿಸಿದರು.







ಈ ಸಂದರ್ಭದಲ್ಲಿ ಎಚ್ ಬಿ ರಾಧಾಕೃಷ್ಣ( ಕ್ರೀಡೆ), ವಸಂತಕುಮಾರ್ ಕಮಿಲ ಬೆಂಗಳೂರುವ(ಸಮಾಜಸೇವೆ), ಉಮೇಶ ಬಿಳಿಮಲೆ (ಸಾಹಿತ್ಯ) ಶಿವರಾಮ ಕುಂಞಿಟ್ಟಿ( ಸಾಹಿತ್ಯ), ವೇಣುಗೋಪಾಲ ದೇರಪ್ಪಜ್ಜನ ಮನೆ ( ಕ್ರೀಡೆ ಮತ್ತು ಕಲಾಪೋಷಕ), ಶಿವರಾಮ ಕಲ್ಮಡ್ಕ(ರಂಗಭೂಮಿ) ,ಬೊಳಿಯ ಅಜಿಲ ಮತ್ತು ಚಿದಾನಂದ ಅಡ್ಡನಪಾರೆ( ಭೂತಾರಾಧನೆ),ಕು. ರಚನಾ ಚಿದ್ಗಲ್ಲು( ವಿದ್ಯಾರ್ಥಿ ಪ್ರತಿಭೆ-ಕಲೆ) ಉಲ್ಲಾಸ್ ಕಜ್ಜೋಡಿ ಮತ್ತು ನಿರಂಜನ ಕಡ್ಲಾರ್ ( ಯುವ ಪ್ರತಿಭೆ) ದೇವಿ ಪ್ರಸಾದ್ ಚಿಕ್ಮುಳಿ (ಯುವ ಉದ್ಯಮಿ)ರಿಗೆ ಸಿರಿಗನ್ನಡ ಸನ್ಮಾನ ನಡೆಯಿತು.
ಅಮರ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು, ಯುವ ತೇಜಸ್ಸು ಟ್ರಸ್ಟ್ ಪಂಜ, ಪುಸ್ತಕದ ಗೂಡು ಹಾಲೆಮಜಲು, ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು, ವಿಪತ್ತು ನಿರ್ವಹಣಾ ತಂಡ ಗುತ್ತಿಗಾರು ಇವರಿಗೆ ಸನ್ಮಾನ ನಡೆಯಿತು.

ಸಮ್ಮೇಳನಾಧ್ಯಕ್ಷ ಎ.ಕೆ.ಹಿಮಕರ, ಸಂಘಟನಾ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಪ್ರಧಾನ ಕಾರ್ಯದರ್ಶಿ ಕೇಶವ ಹೊಸೊಳಿಕೆ ಯವರನ್ನು ಸನ್ಮಾನಿಸಲಾಯಿತು.
ಶ್ರೀಮತಿ ರೂಪವಾಣಿ , ಬಿಟ್ಟಿ ಬಿ. ನೆಡುನೀಲಂ ಸನ್ಮಾನಿತರ ಪರಿಚಯ ವಾಚಿಸಿದರು. ರಾಮಚಂದ್ರ ಪಳಂಗಾಯ ಸ್ವಾಗತಿಸಿ, ವೆಂಕಪ್ಪ ಗೌಡ ಕೇನಾಜೆ ವಂದಿಸಿದರು. ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.










