ಫ್ಯಾಷನ್ ಷೋ ಸ್ಪರ್ಧೆಯಲ್ಲಿ ಸಮೃದ್ಧಿ ಎಸ್. ಫಸ್ಟ್‌ ರನ್ನರ್ ಅಪ್

0

ಆದ್ಯಾಸ್ಮಿ ಫಿಟ್ನೆಸ್ ಸ್ಟುಡಿಯೋ ಮತ್ತು ದೇಯೀ ಮೋಬೈಲ್ಸ್ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನ.16 ರಂದು ಆಯೋಜಿಸಿದ್ದ ಫ್ಯಾಷನ್ ಷೋ ಸ್ಪರ್ಧೆಯಲ್ಲಿ ಗೂನಡ್ಕದ ಸಮೃದ್ಧಿ ಎಸ್. ಟ್ರೆಡಿಷನಲ್ ಮತ್ತು ವೆಸ್ಟರ್ನ್ ರೌಂಡ್ ನಲ್ಲಿ ಮಿಂಚಿ ಪ್ರಿನ್ಸೆಸ್ ಆಫ್ ಮಲ್ನಾಡ್ ಮೊದಲ ರನ್ನರ್ ಅಪ್ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಈಗಾಗಲೇ ವಿವಿಧ ಭಾಗಗಳಲ್ಲಿ ನಡೆದ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಕಿರೀಟಗಳನ್ನು ಮೂಡಿಗೇರಿಸಿಕೊಂಡಿರುವ ಈಕೆ ನಗರ ಪಂಚಾಯತ್ ಉದ್ಯೋಗಿ ಆಶಾ ಬಿ.ಆರ್.ಮತ್ತು ಎಸ್ ಡಿ ಎಂ ಉದ್ಯೋಗಿ ಸದಾನಂದ ದಂಪತಿಗಳ ಪುತ್ರಿ.

ಈಕೆ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 3 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.