ನನ್ನನ್ನು ಉಚ್ಚಾಟನೆ ಮಾಡಿದ್ದಾರೆಂಬ ಪತ್ರ ನನಗೆ ಬಂದೇ ಇಲ್ಲ

0

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದಲೇ ಸ್ಪರ್ಧೆ : ಜಿ.ಕೆ.ಹಮೀದ್

ಸಂಪಾಜೆ ಕಾಂಗ್ರೆಸ್ ಲಿಮಿಟೆಡ್ ಕಂಪೆನಿ ಇದ್ದಂತೆ-ಯಾರನ್ನೂ ವಿಶ್ವಾಸಕ್ಕೆ ಪಡೆಯುತಿಲ್ಲ

ನಾನು ಹಿಂದೆಯೂ ಕಾಂಗ್ರೆಸ್. ಈಗಲೂ ಅಲ್ಲೇ ಇದ್ದೇನೆ. ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿಯೂ ಕಾಂಗ್ರೆಸ್ ನಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು‌ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ‌ ಜಿ.ಕೆ. ಹೇಳಿದ್ದಾರೆ.

ನ.18ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಸಂದರ್ಭ ಪರ್ತಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು.

“ನಾವು ಅಭಿವೃದ್ಧಿಗೆ ಒತ್ತು‌ ನೀಡುತ್ತೇವೆ.‌ಗ್ರಾಮಕ್ಕೆ ಯಾರೇ ಅನುದಾನ ತಂದರೂ ಅವರನ್ನು ಪಂಚಾಯತ್ ನಿಂದ ಗೌರವಿಸುತ್ತೇವೆ. ಟಿ.ಎಂ. ಶಹೀದ್ ರವರು ಅತೀ ಹೆಚ್ಚು ಅನುದಾನ ತರಿಸಿದ್ದಾರೆ. ಸನ್ಮಾನಿಸಿದ್ದೇವೆ. ಮುಂದೆ ಯಾರು ಬೇಕಾದರೂ ಅಭಿವೃದ್ಧಿ ಗೆ ಅನುದಾನ ತರಿಸಲಿ. ನಾವು ಗೌರವಿಸುತ್ತೇವೆ. ಗುದ್ದಲಿ ಪೂಜೆ ಸಂದರ್ಭ ಸ್ಥಳೀಯ ಶಾಸಕರನ್ನು‌ ಕರೆಯಬೇಕಾದದ್ದು ನಿಯಮ. ಕರೆದಿದ್ದೇವೆ. ನಮ್ಮ ಮೇಲೆ ಆರೋಪಗಳು ಇರಬಹುದು. ಆರೋಪ ಮಾಡುವವರು ಆತ್ಮಾವಲೋಕನ ಮಾಡಿಕೊಳ್ಳಲಿ. ಬಾಲಿಶ ಹೇಳಿಕೆಯನ್ನು ನೀಡುವುದು ಸರಿಯಲ್ಲ” ಎಂದರು.

*ಸಂಪಾಜೆಯಲ್ಲಿ ವಲಯ ಕಾಂಗ್ರೆಸ್ ಎಂಬುದು ಇಲ್ಲ. ಗ್ರಾಮ ಕಾಂಗ್ರೆಸ್ ಮಾತ್ರ. ಅದು ಲಿಮಿಟೆಡ್ ಕಂಪನಿ ಇದ್ದಂತೆ. ಅವರು ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುತ್ತಿಲ್ಲ. ವಿಶ್ವಾಸಕ್ಕೆ ಪಡೆದರೆ ಇಂತ ಸಮಸ್ಯೆಗಳು ಉದ್ಬವಿಸುವುದಿಲ್ಲ ಎಂದು ಹೇಳಿದರಲ್ಲದೆ, ನನ್ನನ್ನು ಉಚ್ಚಾಟನೆ ಮಾಡಿದ್ದಾರೆಂಬುದು ಮುಗಿದ ಅಧ್ಯಾಯ. ನನಗೆ ಪತ್ರವೇ ಬಂದಿಲ್ಲ. ಹಿಂದೆ ಮಮತಾ ಗಟ್ಟಿಯವರು ಬಂದು ಮಾತುಕತೆ ಮಾಡಿ ಎಲ್ಲವೂ ಸರಿಯಾಗಿದೆ ಎಂದಿದ್ದಾರೆ. ಕಾಂಗ್ರೆಸ್ ಬ್ಲಾಕ್ ಸಭೆಗೆ ನನಗೆ ಆಹ್ವಾನ ಸಿಗುತ್ತದೆ. ಅಲ್ಪಸಂಖ್ಯಾತ ಘಟಕ ಸಭೆಗೂ ಆಹ್ವಾನ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಬೂತ್ ನಲ್ಲಿ ನಾನೇ ಕುಳಿತಿದ್ದೆ ಎಂದರು.

“ಮುಂದಿನ‌ ಗ್ರಾ.ಪಂ. ಚುನಾವಣೆಯಲ್ಲಿ ನನಗೆ ಪಕ್ಷದಿಂದ ಅವಕಾಶ ಸಿಗುತ್ತದೆ. ಎಲ್ಲರೂ ಸ್ಪರ್ದಿಸುತ್ತೇವೆ. ಇಲ್ಲಿ ಅವಕಾಶ ಸಿಗದಿದ್ದರೆ ಬ್ಲಾಕ್, ಜಿಲ್ಲೆಯವರನ್ನು ಕಂಡು ಮಾತನಾಡುತ್ತೇವೆ. ನಾವಂತು ಸ್ಪರ್ಧೆ ಮಾಡುವುದು ನಿಶ್ಚಿತ” ಎಂದು‌ ಜಿ.ಕೆ. ಹಮೀದ್ ಹೇಳಿದರು.