















೨೦೨೫-೨೬ ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಪರಿಶಿಷ್ಟ ಜಾತಿ ರೈತರಿಗೆ ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ಶೇ.೫೦ ರಂತೆ ಸಹಾಯಧನ ಲಭ್ಯವಿದ್ದು ತಾಲೂಕಿಗೆ ೩.೦೦ ಲಕ್ಷ ಅನುದಾನವಿರುತ್ತದೆ. ಆಸಕ್ತರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಸುಳ್ಯ ಕಛೇರಿಗೆ ದಿನಾಂಕ : 29-11-2025 ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಪರಿಶೀಲಿಸಿ ಕಾರ್ಯದೇಶ ನೀಡಿದ ನಂತರ ರೈತರು ಅನುಮೋದಿತ / ಎಂಪ್ಯಾನಲ್ ಸಂಸ್ಥೆಗಳಿಂದ ಖರೀದಿ ಮಾಡಲು ಪೂರ್ಣ ಮೊತ್ತವನ್ನು NEFT / RTGS ಮುಖಾಂತರ ಸಂಸ್ಥೆಗೆ ಪಾವತಿಸಿದ ರಶೀದಿ ಹಾಗೂ ಸಂಬಂಧಪಟ್ಟ ಕಂಪೆನಿ / ಸಂಸ್ಥೆಯಿಂದ ಹಣ ಪಾವತಿಸಿದ ಬಗ್ಗೆ ದೃಢೀಕರಣದೊಂದಿಗೆ ಕಾರ್ಯದೇಶ ನಂತರದ ದಿನಾಂಕದ ಖರೀದಿ ಬಿಲ್ಲು ಪಡೆದು ಈ ಕೆಳಗಿನ ದಾಖಲಾತಿಯೊಂದಿಗೆ ನೀಡಬೇಕು.
ಅರ್ಜಿಯೊಂದಿಗೆ ಲಗತ್ತಿಸಬೇಕಾದ ವಿವರಗಳು ಈ ಕೆಳಗಿನಂತೆ ಇರುತ್ತದೆ.
ಚಾಲ್ತಿಯಲ್ಲಿರುವ ಅರ್ಜಿದಾರರ ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್.
ಆಧಾರ್ ಕಾರ್ಡ್ ಜೆರಾಕ್ಸ್.
ಜಾತಿ ಪ್ರಮಾಣ ಪತ್ರ
ಆರ್.ಟಿ.ಸಿ.,(ಜಂಟಿ ಖಾತೆ ಹೊಂದಿದ್ದಲ್ಲಿ, ಉಳಿಕೆದಾರರಿಂದ ಒಪ್ಪಿಗೆ/ಜಿ.ಪಿ.ಎ. ಪತ್ರ.)
೨೦೨೫-೨೬ ನೇ ಸಾಲಿನ ಖಏಗಿಙ ಯಡಿ ಸಾಮಾನ್ಯ ವರ್ಗದ ರೈತರಿಗೆ ೨೯೨೯೩ ಮೀ ಅಳತೆಯ ನೀರು ಸಂಗ್ರಹಣ ಘಟಕ ನಿರ್ಮಾಣಕ್ಕೆ ೧.೫೦ ಲಕ್ಷ ಅನುದಾನವಿದ್ದು ಆಸಕ್ತ ರೈತರು ದಿನಾಂಕ : ೨೯-೧೧-೨೦೨೫ ರೊಳಗೆ ಅರ್ಜಿ ಸಲ್ಲಿಸಬಹುದು
೨೦೨೫-೨೬ ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತಾಲೂಕಿನ ಪರಿಶಿಷ್ಟ ಜಾತಿಯ ೨೦ ಜನ ರೈತರಿಗೆ ಹಾಗೂ ಪರಿಶಿಷ್ಟ ಪಂಗಡದ ೫ ಜನ ರೈತರಿಗೆ ಹೊರ ರಾಜ್ಯ ಪ್ರವಾಸ ಹಾಗೂ ರಾಜ್ಯದೊಳಗೆ ತರಬೇತಿಗೆ ಅನುದಾನವಿದ್ದು, ಆಸಕ್ತರು ದಿನಾಂಕ ೨೯/೧೧/೨೦೨೫ ರೊಳಗೆ ಜಾತಿ ಪ್ರಮಾಣ ಪತ್ರ, ಆಧಾರ್ ಹಾಗೂ RTC ಯೊಂದಿಗೆ ಹಿರಿಯ ಸಹಾಯಕ ತೊಟಗಾರಿಕೆ ನಿರ್ದೇಶಕರು ಕಚೇರಿಗೆ ಅರ್ಜಿ ಸಲ್ಲಿಸುವುದು.









