ಸುಳ್ಯ ಜಟ್ಟಿಪಳ್ಳ ನಿವಾಸಿ ಇಬ್ರಾಹಿಂ ರವರು ಕೇರಳದ ತಿರುವನಂತಪುರಂನಲ್ಲಿರುವ ಸ್ನೇಹ ಸಾಗರಂ ಚಿಕಿತ್ಸಾಲಯದಲ್ಲಿ ನ.24 ರಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.















ಅವರ ಪತ್ನಿ ಹಲವು ವರ್ಷಗಳ ಹಿಂದೆ ನಿಧನರಾಗಿದ್ದು, ಇಬ್ರಾಹಿಂರವರು ಜಟ್ಟಿಪಳ್ಳ ಮನೆಯಲ್ಲಿ ಮಕ್ಕಳ ಜೊತೆ ವಾಸವಾಗಿದ್ದರು.
ಇತ್ತೀಚಿಗೆ ಅವರ ಮನೆಯು ಮುರಿದು ಬೀಳುವ ಪರಿಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಜಟ್ಟಿಪಳ್ಳ ಜಮಾಅತರು ಸೇರಿ ಅವರಿಗೆ ಹೊಸ ಮನೆ ನಿರ್ಮಿಸಿಕೊಟ್ಟಿದ್ದರು.
ನೂತನ ಮನೆಯ ಗೃಹಪ್ರವೇಶ ನಂತರ ಅಸೌಖ್ಯದಿಂದಿದ್ದ ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲದಿದ್ದುದರಿಂದ ಜಟ್ಟಿಪಳ್ಳದ ಊರವರು ಸೇರಿ ಅವರನ್ನು ಕೇರಳದ ಪ್ರಸಿದ್ಧ ವಾಗ್ಮಿ ನೌಶಾದ್ ಬಾಖವಿಯವರ ಸ್ನೇಹ ಸಾಗರಂ ನಿರಾಶ್ರಿತರ ಅಭಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು.
ನ.೨೪ ರಂದು ಮುಂಜಾನೆ ತಿರುವನಂತಪುರಂನಲ್ಲಿರುವ ಸ್ನೇಹ ಸಾಗರಂನಲ್ಲಿ ನಿಧನರಾದರು. ಮೃತರ ಪುತ್ರರಾದ ಇಕ್ಬಾಲ್, ನೌಫಲ್, ಪುತ್ರಿ ಮಿನಾಲ್‌ರವರನ್ನು ಅಗಲಿದ್ದಾರೆ.
ಮೃತ ದೇಹವನ್ನು ಇಂದು ಸಂಜೆ ಸುಳ್ಯಕ್ಕೆ ತಂದು ಸುಳ್ಯ ಗಾಂಧಿಯವರ ಜುಮ್ಮಾ ಮಸೀದಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ನಿರ್ಧರಿಸಲಾಗಿದೆ.










