ಭಾರತ್ ಸ್ಕೌಟ್ಸ್ -ಗೈಡ್ಸ್ ರಾಜ್ಯ ಸಂಸ್ಥೆ, ಹಾಗೂ ಕೊಡಗು ಜಿಲ್ಲಾ ಸಂಸ್ಥೆ ರವರು ಮಡಿಕೇರಿಯಲ್ಲಿ ನ.23 ರಂದು ನಡೆಸಿದ ಮೈಸೂರು ವಿಭಾಗೀಯ ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲಾ ಸ್ಕೌಟ್ ವಿದ್ಯಾರ್ಥಿಗಳಾದ ಚಂದನ್ ಎಂ ಎಸ್ , ನೇಸರ್ ಪಿ.ಯು , ತನ್ಮಯ್ ಸೋಮಯಾಗಿ, ಲಕ್ಷ್ಯಜಿತ್ ಜಿ.ರೈ , ದಿವಿಜ್ ಯು. ಎಂ,ಬಿಪಿನ್ ಕುಮಾರ್ ಎಸ್ , ಹಾರ್ದಿಕ್ ಪಿ , ನಂದನ್ ನಾಯಕ್ ರನ್ನೊಳಗೊಂಡ ತಂಡ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುವುದರ ಮೂಲಕ ಪ್ರಥಮ ಸ್ಥಾನವನ್ನು ಪಡೆಯುವುದರೊಂದಿಗೆ ಬಳ್ಳಾರಿಯಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.















ಇವರಿಗೆ ಸ್ಕೌಟ್ ಶಿಕ್ಷಕ ಭಾನುಪ್ರಕಾಶ್ ಅರಂತೋಡು ಇವರು ಮಾರ್ಗದರ್ಶನ ನೀಡಿರುತ್ತಾರೆ. ಫಾದರ್ ಆಲ್ವಿನ್ ಎಡ್ವರ್ಡ್ ಡಿಕುನ್ಹಾ , ಮುಖ್ಯೋಪಾಧ್ಯಾಯಿನಿ ಸಿ. ಮೇರಿ ಸ್ಟೆಲ್ಲಾ ಹಾಗೂ ಶಿಕ್ಷಕ ವೃಂದದವರು ಪ್ರೋತ್ಸಾಹ ನೀಡಿರುತ್ತಾರೆ.



