ವಿ.ಆರ್. ಡಬ್ಲ್ಯೂ, ಎಂ.ಆರ್.ಡಬ್ಲ್ಯೂ ಗಳಿಗೆ ಕನಿಷ್ಠ ವೇತನಕ್ಕೆ ಒತ್ತಾಯ : ಶಾಸಕರಿಗೆ ಮನವಿ

0

ವಿ.ಆರ್. ಡಬ್ಲ್ಯೂ, ಎಂ.ಆರ್.ಡಬ್ಲ್ಯೂ ಗಳಿಗೆ ಕನಿಷ್ಠ ವೇತನಕ್ಕೆ ಒತ್ತಾಯಿಸಿ ಸುಳ್ಯ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ.

ನ.24ರಂದು ಸುಳ್ಯದಲ್ಲಿ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರಿಗೆ ರಾಜ್ಯದ ವಿಶೇಷ ಚೇತನರ ಕಾರ್ಯಕರ್ತರ ರಾಜ್ಯ ಸಮಿತಿ ವತಿಯಿಂದ ಮನವಿ ಮಾಡಲಾಗಿದ್ದು, ಬೆಳಗಾವಿ ಅಧಿವೇಶನದಲ್ಲಿ ವಿಕಲಚೇತನರ ಇಲಾಖೆಯಡಿ ಬರುವ ರಾಜ್ಯದ ಎಲ್ಲ ಗ್ರಾಮ, ನಗರ, ತಾಲೂಕು ಪಂಚಾಯತ್ ಗಳಲ್ಲಿ ಕರ್ತವ್ಯ ನಿರ್ವಹಿಸುವ ವಿ ಆರ್ ಡಬ್ಲ್ಯೂ, ಎಂ ಆರ್ ಡಬ್ಲ್ಯೂ ರವರಿಗೆ ಕನಿಷ್ಠ ವೇತನ ನೀಡಲು ಸರ್ಕಾರ ಮತ್ತು ಮುಖ್ಯಮಂತ್ರಿ ಅವರನ್ನು ಒತ್ತಾಯ ಮಾಡುವಂತೆ ಮತ್ತು ಸದನ ದಲ್ಲಿ ಚರ್ಚಿಸುವಂತೆಯೂ ಮನವಿ ಮಾಡಲಾಯಿತು.

ಈ ವೇಳೆ ವಿಶೇಷ ಚೇತನರ ಕಾರ್ಯಕರ್ತರ ರಾಜ್ಯ ಸಮಿತಿ
ಸಂಸ್ಥಾಪಕ, ಸುಳ್ಯ ನಗರ ಯು ಆರ್ ಡಬ್ಲ್ಯೂ ಪ್ರವೀಣ್ ನಾಯಕ್ ಸುಳ್ಯ, ಸುಳ್ಯ ತಾಲ್ಲೂಕು ಪಂಚಾಯತ್ ಎಂ ಆರ್ ಡಬ್ಲ್ಯೂ ಮತ್ತು ಸಮಿತಿ ಯ ಸಲಹೆಗಾರರಾದ ಚಂದ್ರಶೇಖರ್, ರಾಜ್ಯ ಕಾರ್ಯದರ್ಶಿ ವಿ ಆರ್ ಡಬ್ಲ್ಯೂ ತಿರುಮಲೇಶ್ವರ ಮಡಿಕೇರಿ ಹಾಜರಿದ್ದರು.