ಶ್ರಮದ ಮೂಲಕ ಪಡೆದ ಪ್ರಶಸ್ತಿ ಶ್ರೇಷ್ಟ : ಸಿರಾಜುದ್ದೀನ್ ಸಖಾಫಿ
ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ತಾಯಂದಿರುಗಳ ಪಾತ್ರ ಹಿರಿದು: ಲತೀಫ್ ಸಖಾಫಿ

ಹಯಾತುಲ್ ಇಸ್ಲಾಂ ಕಮಿಟಿ ರಿ .ಜಟ್ಟಿಪಳ್ಳ ಬುಸ್ತಾನುಲ್ ಉಲೂಂ ಮದ್ರಸ ಇದರ ಪೇರೆಂಟ್ಸ್ ಮೀಟ್ ಹಾಗೂ ಸನ್ಮಾನ ಸಮಾರಂಭವು ಹಯಾತುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಾಜಿ ಮುಹಮ್ಮದ್ ಬಿ ಎಂ ರವರ ಅಧ್ಯಕ್ಷತೆಯಲ್ಲಿ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಎಸ್ ಜೆ ಎಂ ರಾಜ್ಯ ಮಟ್ಟದ ಮುಅಲ್ಲಿಂ ಅವಾರ್ಡ್ ಪಡೆದ,ಮುಅಲ್ಲಿಂ ಮೆಹರ್ಜಾನ್ ಮದ್ರಸ ಅಧ್ಯಾಪಕರ ಸ್ಪರ್ಧೆಯಲ್ಲಿ ರೇಂಜ್ ಮಟ್ಟದ ಹೈ ಝೋನ್ ವಿಭಾಗದ ಕಲಾ ಪ್ರತಿಭೆಯಾಗಿ ಜಿಲ್ಲೆಯಿಂದ ರಾಜ್ಯಕ್ಕೆ ಆಯ್ಕೆಯಾಗಿ,ರಾಜ್ಯ ಹೈ ಝೋನ್ ವಿಭಾಗ ಮಲಯಾಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬುಸ್ತಾನುಲ್ ಉಲೂಂ ಮದ್ರಸ ಸದರ್ ಉಸ್ತಾದ್ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ರವನ್ನು ಹಯಾತುಲ್ ಇಸ್ಲಾಂ ಕಮಿಟಿ ಹಾಗೂ ಊರ ರವರ ವತಿಯಿಂದ ಸನ್ಮಾನಿಸಲಾಯಿತು.

ಗಾಂಧಿನಗರ ಮದ್ರಸ ಸದರ್ ಮುಅಲ್ಲಿಂ ಸಿರಾಜುದ್ದೀನ್ ಸಖಾಫಿ ಚಿಕ್ಕಮಗಳೂರು ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಮಿಟಿ ಪ್ರಧಾನ ಕಾರ್ಯದರ್ಶಿ ಶರೀಫ್ ಸುದ್ದಿ ಸ್ವಾಗತಿಸಿ ಪ್ರಾಸ್ಥಾವಿಕ ಭಾಷಣಗೈದರು.ಕಾರ್ಯದರ್ಶಿ ಕಬೀರ್ ಜಟ್ಟಿಪಳ್ಳ ಸನ್ಮಾನ ಪತ್ರ ವಾಚಿಸಿದರು.ರಾಜ್ಯ ಮುಅಲ್ಲಿಂ ಮೆಹರ್ಜಾನ್ ಸ್ಪರ್ಧಾಕಾರ್ಯಕ್ರಮದಲ್ಲಿ ಸಾಧನೆಗೈದ ಗಾಂಧಿನಗರ ಮದ್ರಸ ಮುಅಲ್ಲಿಂ ಇರ್ಫಾನ್ ಸಅದಿ ಜೋಗಿಬೆಟ್ಟು ಹಾಗೂ ಬುಸ್ತಾನುಲ್ ಉಲೂಂ ಮದ್ರಸ ಜಟ್ಟಿಪಳ್ಳ ಮದ್ರಸ ಮುಅಲ್ಲಿಂ ಸಿರಾಜ್ ಸಅದಿ ಅಲೆಕ್ಕಾಡಿಯವರನ್ನು ಅಭಿನಂದಿಸಲಾಯಿತು.















ಕಾರ್ಯಕ್ರಮದಲ್ಲಿ ಅಬ್ದುಲ್ಲ ಮುಸ್ಲಿಯಾರ್ ಗೂನಡ್ಕ,ಕಮಿಟಿ ಗೌರವಾಧ್ಯಕ್ಷ ಅಬೂಬಕ್ಕರ್ ಕೆ ಎ ಜಟ್ಟಿಪಳ್ಳ, ಕೋಶಾಧಿಕಾರಿ ಎನ್ ಎ ಅಬ್ದುಲ್ಲ,ಸದಸ್ಯರುಗಳಾದ ತಾಜುದ್ದೀನ್,ಅಬ್ದುಲ್ ರಝಾಖ್,ಗಾಂಧಿನಗರ ಮದ್ರಸಾ ಮುಅಲ್ಲಿಮರುಗಳಾದ ರಿಹಾನ್ ಸಅದಿ,ಶಿಹಾಬುದ್ದೀನ್ ಫಾಳಿಲಿ,ಸ್ಥಳೀಯ ಹಿರಿಯರಾದ ಸಿ ಎ ಅಬ್ದುಲ್ಲ,ಮೊಯಿದೀನ್,ಇಸ್ಮಾಹಿ ಲ್, ಮುಸ್ತಫಾ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಜೊತೆಯಲ್ಲಿ ನಡೆದ ಪೇರೆಂಟ್ಸ್ ಮೀಟ್ ನಲ್ಲಿ ಹೆಚ್ಚಿನ ಸಂಖ್ಯೆಯ ತಾಯಂದಿರುಗಳು ಭಾಗವಹಿಸಿದರು.
ವಿಷಯ ಮಂಡನೆಗೈದ ಸದರ್ ಮುಅಲ್ಲಿಂ ಲತೀಫ್ ಸಖಾಫಿಯವರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ತಾಯಂದಿರ ಪಾತ್ರ ಹಿರಿದೆಂದರು. ಕಲಿತ ಧಾರ್ಮಿಕ ಚೌಕಟ್ಟುಗಳನ್ನು ಮಕ್ಕಳು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವ ಬಗ್ಗೆ ತಾಯಂ ದಿರುಗಳು ಹೆಚ್ಚಿನ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಮದ್ರಸ ಉಸ್ತುವಾರಿ ರಶೀದ್ ಜಟ್ಟಿಪಳ್ಳ ನಿರೂಪಿಸಿ ವಂದಿಸಿದರು.



