ಜಟ್ಟಿಪಳ್ಳ ಮದ್ರಸ ಸಂವಿಧಾನ ದಿನಾಚರಣೆ

0

ಸಂವಿಧಾನ ಭಾರತೀಯರ ಸೌಂಧರ್ಯ – ಲತೀಫ್ ಸಖಾಫಿ ಗೂನಡ್ಕ

ಹಯಾತುಲ್ ಇಸ್ಲಾಂ ಕಮಿಟಿ ರಿ.ಜಟ್ಟಿಪಳ್ಳ ಇದರ ಬುಸ್ತಾನುಲ್ ಉಲೂಂ ಮದ್ರಸ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಸಂವಿಧಾನ ದಿನಾಚರಣೆ ನಡೆಯಿತು. ಅಧ್ಯಾಪಕ ಸಿರಾಜ್ ಸಅದಿ ಅಲೆಕ್ಕಾಡಿ ಉದ್ಘಾಟಿಸಿದರು. ಸದರ್ ಮುಅಲ್ಲಿಂ ವಿಷಯ ಮಂಡಿಸಿ ಸಂವಿಧಾನದ ಗೌರವದ ಬಗ್ಗೆ ವಿವರಿಸಿದರು. ಹಲವಾರು ಜಾತಿ, ಧರ್ಮ, ಪಥ, ಪಂಗಡಗಳು ನೆಲೆಸಿರುವ ಭವ್ಯ ಭಾರತದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಕಲ್ಫಿಸಿದ ಭಾರತೀಯ ಸಂವಿಧಾನವು ಭಾರತೀಯರ ಸೌಂಧರ್ಯವೂ ಸೌಭಾಗ್ಯವೂ ಆಗಿದೆ.

ಪ್ರತಿಯೊಬ್ಬ ಪ್ರಜೆಯೂ ಭಾರತೀಯ ಸಂವಿಧಾನಕ್ಕೆ ತಲೆಬಾಗಿ ಉತ್ತಮ ನಾಗರೀಕನಾಗಿ ಬಾಳಬೇಕು. ಮನುಷತ್ವ ಮೈಗೂಡಿಸಿಕೊಂಡು ಪ್ರತಿಯೊಬ್ಬರೊಂದಿಗೂ ಪ್ರೀತಿ ವಿಶ್ವಾಸದಿಂದ ಜೊತೆಯಾಗಬೇಕು. ಭಾರತೀಯರಾದ ನಾವು ಸರ್ವ ಧರ್ಮೀಯರೊಂದಿಗೆ ಶಾಂತಿ, ಸೌಹಾರ್ಧತೆ, ಸಹಿಷ್ಣುತೆಯಿಂದ ಬಾಳಿ ದೇಶದ ಅಭಿವೃದ್ಧಿಗಾಗಿ ಪಣತೊಡಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭ ಇತ್ತೀಚೆಗೆ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕೆತ್ಸೆ ಫಲಿಸದೆ ನಮ್ಮನ್ನಗಲಿದ ಮದ್ರಸ ಅಧ್ಯಾಪಕ ಜಲಾಲುದ್ದೀನ್ ಹುಮೈದಿ ಯವರ ಅನುಸ್ಮರಣೆ ಹಾಗೂ ತಹ್ಲೀಲ್ ದುಆಃ ಮಜ್ಲಿಸ್ ನಡೆಸಲಾಯಿತು