














ಸುಳ್ಯ ರಾಮ ಮಂದಿರದಲ್ಲಿ ವರ್ಷಂಪ್ರತಿ ಜರುಗುವ ಅರ್ಧ ಏಕಾಹ ಭಜನೆಯು ಡಿ. 1 ರಂದು ಜರುಗಿತು.
ಪ್ರಾತ:ಕಾಲದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಮಧೂರು ರಾಜೇಶ್ ಸರಳಾಯ ರವರ ನೇತೃತ್ವದಲ್ಲಿ ದೀಪ ಸ್ಥಾಪನೆಯಾಗಿ ಭಜನಾ ಸಂಕೀರ್ತನೆಯು ಆರಂಭಗೊಂಡಿತು. ಮಧ್ಯಾಹ್ನ ಮಹಾಪೂಜೆಯು ನಡೆದು ಪ್ರಸಾದ ವಿತರಣೆ ಯಾಯಿತು. ಸಂಜೆ ಭಜನಾ ಮಹಾಮಂಗಳಾರತಿಯಾಗಿ ವಿಶೇಷವಾಗಿ ಸಾರ್ವಜನಿಕ ಶ್ರೀ ದುರ್ಗಾಪೂಜೆಯು ತಂತ್ರಿಯವರ ಮಾರ್ಗದರ್ಶನದಲ್ಲಿ
ಅರ್ಚಕರ ನೇತೃತ್ವದಲ್ಲಿ ನಡೆಯಿತು. ನೂರಾರು ಮಂದಿ ಭಕ್ತರು ಆಗಮಿಸಿ ದುರ್ಗಾ ಪೂಜೆಯ ಸೇವೆ ಯಲ್ಲಿ ಪಾಲ್ಗೊಂಡರು.
ರಾತ್ರಿಪ್ರಸಾದವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.
ಮಂದಿರದ ಧರ್ಮ ದರ್ಶಗಳಾದ ಕೆ. ಉಪೇಂದ್ರ ಪ್ರಭು ಹಾಗೂ ಸದಸ್ಯರು, ಸಾಂಸ್ಕೃತಿಕ ಸೇವಾ ಸಮಿತಿಯಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.










