














ಮೂಲತಃ ಬಾಳಿಲ ಗ್ರಾಮದ ಕುಕ್ಕುತ್ತಡಿ ಕುಟುಂಬದವರಾಗಿದ್ದು, ಪಂಜದ ನೆಕ್ಕಿಲ ಎಂಬಲ್ಲಿ ವಾಸವಾಗಿದ್ದ ರಾಮಚಂದ್ರ ಗೌಡ ಅಸೌಖ್ಯದಿಂದ ಇಂದು ಮಂಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 58 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಪಂಜದಲ್ಲಿ ಆಶಾ ಕಾರ್ಯಕರ್ತೆಯಾಗಿರುವ ಶ್ರೀಮತಿ ಪುಷ್ಪಾ, ಪುತ್ರಿ ಕು. ವೃಂದಾ, ಸಹೋದರರಾದ ತಿಮ್ಮಪ್ಪ ಗೌಡ, ಶಿವರಾಮ ಗೌಡ, ರಾಧಾಕೃಷ್ಣ ಗೌಡ, ಜಯರಾಮ ಗೌಡ ಸೇರಿದಂತೆ ಇಬ್ಬರು ಸಹೋದರಿಯರು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.










