ಗ್ರಾಹಕರು ಸಹಕರಿಸುವಂತೆ ಸುಳ್ಯ ಮೆಸ್ಕಾಂ ಪ್ರಕಟಣೆ
ಈಗಾಗಲೇ ಮಳೆಗಾಲ ಕಳೆದು ಬೇಸಿಗೆ ಪ್ರಾರಂಭವಾಗಿದ್ದು ವಿದ್ಯುತ್ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿರುತ್ತದೆ.
ಬೇಡಿಕೆಗೆ ತಕ್ಕ ವಿದ್ಯುತ್ತನ್ನು ಗುಣಮಟ್ಟದಿಂದ ನಿರಂತರವಾಗಿ ಗ್ರಾಹಕರುಗಳಿಗೆ ಪೂರೈಸುವುದೇ ಮೆಸ್ಕಾಂ ಧ್ಯೇಯ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಹಲವಾರು ವ್ಯವಸ್ಥೆ ಸುಧಾರಣಾ ಕಾಮಗಾರಿಗಳನ್ನು ಸಮಾರೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕಾದ ಅವಶ್ಯಕತೆಯಿದೆ. ಅಲ್ಲದೇ ಜೊತೆ ಜೊತೆಗೆ ವಿದ್ಯುತ್ ಖರೀದಿ ಹಾಗೂ ನಿರ್ವಹಣಾ ವೆಚ್ಚಗಳನ್ನು ಕಾಲಕಾಲಕ್ಕೆ ಪೂರೈಸಬೇಕಾಗಿರುತ್ತದೆ.















ಅದ್ದುದರಿಂದ ಮೆಸ್ಕಾಂ ನ ಆತ್ಮೀಯ ಗ್ರಾಹಕರುಗಳು ತಮ್ಮ ತಮ್ಮ ವಿದ್ಯುತ್ ಸ್ಥಾವರಗಳ ಈಗಾಗಲೇ ಬೇಡಿಕೆ ಮಾಡಲಾಗಿರುವ ಅಧಿಕ ಭದ್ರತಾ ಠೇವಣಿ (ASD DEPOSIT) ಮೊತ್ತಗಳನ್ನು ನಿಗದಿತ ಅವಧಿಯ ಒಳಗಾಗಿ ಪಾವತಿಸಿ ಅನಗತ್ಯ ವಿದ್ಯುತ್ ಕಡಿತಗೊಳ್ಳುವುದನ್ನು ತಪ್ಪಿಸಿಕೊಳ್ಳುವಂತೆ ಸುಳ್ಯ ಮೆಸ್ಕಾಂ ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದೆ.










