















ಅರಂತೋಡು ಗ್ರಾಮ ಪಂಚಾಯತ್ ಮುಂಭಾಗದಲ್ಲಿರುವ ಬಾಜಿನಡ್ಕ ಕಾಂಪ್ಲೆಕ್ಸ್ ನಲ್ಲಿ ಪ್ರಸನ್ನ ಕುಂಟುಕಾಡು ಮತ್ತು ಪ್ರಶಾಂತ ಬಿಳಿಯಾರು ಇವರ ಮಾಲಕತ್ವದ ನೇಸರ ಆಯಿಲ್ ಮಿಲ್ ಮತ್ತು ಫ್ಲೋರ್ ಮಿಲ್ ಡಿ.5ರಂದು ಶುಭಾರಂಭಗೊಂಡಿತು.

ಮುಖ್ಯ ಅತಿಥಿಗಳಾಗಿ ಸಂತೋಷ್ ಕುತ್ತಮೊಟ್ಟೆ, ಕೇಶವ ಅಡ್ತಲೆ, ಕೆ ಕೆ ನಾರಾಯಣ ಕುಂಟುಕಾಡು, ಪದ್ಮನಾಭ ಬಿಳಿಯಾರು, ಪುರುಷೋತ್ತಮ ಉಳುವಾರು, ಆದರ್ಶ ದೇರಾಜೆ, ಉಮೇಶ್ವರ ಗೌಡ ಭಾಜಿನಡ್ಕ ಉಪಸ್ಥಿತಿರಿದ್ದರು. ರುತ್ವಿ ಅಳಿಕೆ ಪ್ರಾರ್ಥಿಸಿ, ಚಿದಾನಂದ ಕಾಡುಪಂಜ ಸ್ವಾಗತಿಸಿ, ವಂದಿಸಿದರು. ಗಾಣದ ತೆಂಗಿನ ಎಣ್ಣೆ ಜೊತೆಗೆ ಮಸಾಲ ಪದಾರ್ಥಗಳು ಸ್ಪರ್ಧಾತ್ಮಕ ದರದಲ್ಲಿ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.











