ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸುಳ್ಯ, ತಾಲೂಕು ಸರ್ಕಾರಿ ಆಸ್ಪತ್ರೆ ಸುಳ್ಯ ಇದರ ಸಂಯುಕ್ತಾಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಡಿಸೆಂಬರ್ 5 ರಂದು ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಬಿ ಮೋಹನ್ ಬಾಬುರವರು ಉದ್ಘಾಟಿಸಿ ಮಾತನಾಡಿ ಎಚ್ಐವಿ ಸೋಂಕು ಮನುಷ್ಯರ ಶರೀರವನ್ನು ನಾಶ ಮಾಡುತ್ತದೆ. ಆರೋಗ್ಯಕ್ಕೆ ಹಾನಿಕಾರವಾದ ಏಡ್ಸ್ ರೋಗವು ಬಹಳ ಅಪಾಯಕಾರಿಯಾಗಿದ್ದು ಜನರು ಈ ಬಗ್ಗೆ ಜಾಗೃತಿ ವಹಿಸಿಕೊಳ್ಳಬೇಕೆಂದು ರೋಗದ ಬಗ್ಗೆ ಜಾಗ್ರತೆ ಮೂಡಿಸುವ ಮಾತನ್ನು ಹಾಡಿದರು.
ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ಮುಖ್ಯಧಿಕಾರಿ ಡಾ. ನವೀನ್ ಎನ್ ಎಸ್ ವಹಿಸಿದ್ದರು.















ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸುಳ್ಯ ತಾಲೂಕು ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಸುಳ್ಯ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕರಾದ
ಕು. ಪ್ರೀತಿ ಎಮ್.ಸಿ, ಮೊದಲಾದವರು ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಸ್ಪತ್ರೆಯ ವೈದ್ಯಗಳಾದ ಡಾ| ಶಿವಕುಮಾರ್,ಡಾ| ಶಾಲಿನಿ, ಸ್ತ್ರೀರೋಗ ತಜ್ಞರು,ಡಾ| ರಜನಿ, ಮಕ್ಕಳ ತಜ್ಞರುಗಳು ಏಡ್ಸ್ ಮತ್ತು ಆರೋಗ್ಯದ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಸದಸ್ಯರುಗಳು ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.ಆಸ್ಪತ್ರೆಯ ಸಿಬ್ಬಂದಿಗಳಾದ ಬಾಲಕೃಷ್ಣ ಸ್ವಾಗತಿಸಿ ಕುಮಾರಿ ಸೌಮ್ಯ ವಂದಿಸಿ ಮುರಳಿಧರ ಕಾರ್ಯಕ್ರಮ ನಿರೋಪಿಸಿದರು.



